PA ಪ್ರೊಡಕ್ಷನ್ಸ್ ನಿಂದ ಎರಡನೇ ಚಿತ್ರ ಘೋಷಣೆ

ವಿಜಯ ದಶಮಿಯ ದಿನ ನೂತನ ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ .
ಎರಡನೇ ಚಿತ್ರಕ್ಕೂ”ಕೊತ್ತಲವಾಡಿ” ನಿರ್ದೇಶಕ ಶ್ರೀರಾಜ್ ಅವರದೆ ನಿರ್ದೇಶನ .
ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು ತಮ್ಮ PA ಪ್ರೊಡಕ್ಷನ್ಸ್ ಲಾಂಛನದಲ್ಲಿ ತಮ್ಮ ಮೊದಲ ಚಿತ್ರವಾಗಿ “ಕೊತ್ತಲವಾಡಿ” ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗ ವಿಜಯ ದಶಮಿಯ ಶುಭದಿನದಂದು PA ಪ್ರೊಡಕ್ಷನ್ಸ್ ಮೂಲಕ ಎರಡನೇ ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಈ ಚಿತ್ರವನ್ನೂ “ಕೊತ್ತಲವಾಡಿ” ನಿರ್ದೇಶಕ ಶ್ರೀರಾಜ್ ಅವರೆ ನಿರ್ದೇಶಿಸಲಿದ್ದಾರೆ. ಬಹುತೇಕ “ಕೊತ್ತಲವಾಡಿ” ಚಿತ್ರದ ತಂತ್ರಜ್ಞರ ತಂಡವೇ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ ಎಂದು ತಿಳಿಸಿರುವ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್, ಸದ್ಯದಲ್ಲೇ ನೂತನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

