ಆತ್ಮಹತ್ಯೆಗೆ ಶರಣಾದ ನಟ ಸಂಪತ್…!

ಕನ್ನಡ ಸಿನಿಮಾರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟ ಸಂಪತ್ ಜಯರಾಮ್ ನಿಧನರಾಗಿದ್ದಾರೆ….ಅಗ್ನಿ ಸಾಕ್ಷಿ ಸೇರಿದಂತೆ ಹಲವು ಧಾರಾವಾಹಿಯಲ್ಲಿ ಸಂಪತ್ ನಟನೆ ಮಾಡಿದ್ದರು…ಇತ್ತೀಚಿಗಷ್ಟೆ ಬಿಡುಗಡೆ ಆದ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾದಲ್ಲಿಯೂ ಅಭಿನಯ ಮಾಡಿದ್ದಾರೆ ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸಿರೋ ನಟ ಸಂಪತ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವರ್ಷವಾಗಿತ್ತು.. ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ನಟ ಸಂಪತ್ ಜಯರಾಮ್ ನಿನ್ನೆ ಕೊನೆಯುಸಿರೆಳೆದಿದ್ದಾರೆ.. ಸಂಪತ್ಗೆ 35 ವರ್ಷ ವಯಸ್ಸಾಗಿತ್ತು. ನಿನ್ನೆ ನೆಲಮಂಗಲ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಟ… ನೆಲಮಂಗಲ ಆಸ್ಪತ್ರೆಯಿಂದ ಎನ್ ಆರ್ ಪುರಕ್ಕೆ ಮೃತದೇಹವನ್ನ ಅವ್ರ ಸ್ವಂತ ಊರಿಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ….ಸಂಪತ್ ಅವಕಾಶಗಳಿಲ್ಲದೆ ಮನನೊಂದಿದ್ದು ಮನೆ ನೆಡೆಸಲು ಪರದಾಡುತ್ತಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ….