ಮಲ್ಲೇಶ್ವರಂ CTR ನಲ್ಲಿ ಮಸಾಲೆ ದೋಸೆ ತಿನ್ನಲು ಬಂದ ಅನುಷ್ಕಾ-ವಿರಾಟ್ ಕೊಹ್ಲಿ

ಮಲ್ಲೇಶ್ವರಂ ctr ಹೋಟೆಲ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ …ಬೆಂಗಳೂರಿನಲ್ಲಿ ಬೆಸ್ಟ್ ದೋಸೆ ಎಲ್ಲಿ ಸಿಗುತ್ತೆ ಅನ್ನೋ ಲಿಸ್ಟ್ ನಲ್ಲಿ ಸಿಟಿಆರ್ ಇದ್ದೇ ಇರುತ್ತೆ…ಇನ್ನು ಈ ಸಿಟಿಆರ್ ಹೋಟೆಲ್ ನ ದೋಸೆಗೆ ಬಾಲಿವುಡ್ ಸ್ಟಾರ್ ಗಳು ಫಿದಾ ಆಗಿರೋ ವಿಚಾರ ಎಲ್ಲರಿಗೂ ಗೊತ್ತಿದೆ…ನಟಿ ಅನುಷ್ಕಾ ಬೆಂಗಳೂರಿಗೆ ಬಂದಾಗಲೆಲ್ಲ ಸಿಟಿಆರ್ ದೋಸೆ ಮಿಸ್ ಮಾಡದೇ ತಿಂದು ಹೋಗ್ತಾರೆ….ಈ ವಿಚಾರವನ್ನ ಸಾಕಷ್ಟು ಭಾರಿ ಹೇಳಿದ್ರು…
ಸದ್ಯ ಆರ್ ಸಿ ಬಿ ಮ್ಯಾಚ್ ಗೆ ಪತಿ ಜೊತೆ ಬಂದಿರೋ ಅನುಷ್ಕಾ ..ಸಿಟಿಆರ್ ದೋಸೆಯನ್ನ ಸವಿಯೋಕೆ ಖುದ್ದಾಗೆ ಮಲ್ಲೇಶ್ವರಂ ಗೆ ಎಂಟ್ರಿಕೊಟ್ಟಿದ್ದಾರೆ..ಅದು ಕಿಂಗ್ ಕೊಹ್ಲಿ ಜೊತೆ ಅನ್ನೋದೆ ಸ್ಪೆಷಲ್…ತಾವಷ್ಟೇ ಅಲ್ಲ ತಮ್ಮ ಪತಿಯೂ ಕೂಡ ಸಿಟಿಆರ್ ಹೋಟೆಲ್ ನ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಟೇಸ್ಟ್ ನೋಡಲಿ ಅಂತ ಇಬ್ಬರು ಸಿಟಿಆರ್ ಗೆ ಬಂದು ತಿಂದು ಹೊರಟಿದ್ದಾರೆ…ಈ ವಿಷ್ಯ ಫ್ಯಾನ್ಸ್ ಗೆ ಗೊತ್ತಾಗಿದ್ದೇ ಗೊತ್ತಾಗಿದ್ದು…ಹೋಟೆಲ್ ಮುಂದೆ ಜಮಾಯಿಸಿಬಿಟ್ರು…ಅನುಷ್ಕಾ ಮತ್ತು ವಿರಾಟ್ ಅಭಿಮಾನಿಗಳ ಮಧ್ಯೆಯೇ ಕಾರ್ ಹತ್ತಿ ಹೊರಟ್ರು……