ಸಪ್ತಮಿ ಹೊಸ ಫೋಟೋ ಶೂಟ್ …ಡ್ರೆಸ್ ಕುಲ ನಾ ಇದು ? ಅಂದ್ರು ಫ್ಯಾನ್ಸ್ !

ನಟಿ ಸಪ್ತಮಿಗೌಡ ಕಾಂತಾರ ಸಿನಿಮಾ ಹಿಟ್ ಆದ್ಮೇಲೆ ಸಖತ್ ಫೇಮಸ್ ಆದ್ರು…ಸಿನಿಮಾನೇ ಬೇಡ ಅಂತಿದ್ದ ನಟಿ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನ ಒಪ್ಪಿಕೊಳ್ಳಲು ಶುರು ಮಾಡಿದ್ದಾರೆ…ಈ ಹಿಂದೆ ಬಹುತೇಕ ಸೀರೆಯಲ್ಲಿಯೇ ಕಾಣಿಸಿಕೊಳ್ತಿದ್ದ ಸಪ್ತಮಿ ಈಗ ತಮ್ಮ ಔಟ್ ಲುಕ್ ಅನ್ನು ಕೊಂಚ ಬದಲಾಯಿಸಿಕೊಂಡಿದ್ದಾರೆ…ಸ್ವಲ್ಪ ಮಾಡ್ರನ್ ಟಚ್ ಇರೋ ಕಾಸ್ಟ್ಯೂಮ್ ಗಳನ್ನ ಧರಿಸೋದಕ್ಕೆ ಶುರು ಮಾಡಿದ್ದಾರೆ…

ಇತ್ತೀಚಿಗಷ್ಟೇ ಸಪ್ತಮಿ ಹೊಸ ಔಟ್ ಫಿಟ್ ನೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಅದ್ರ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ…ಅದನ್ನ ನೋಡಿದ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ…ಕೆಲವ್ರು ಇಂದೆಂಥ ಡ್ರಸ್ ಅಂತ ಕಮೆಂಟ್ ಮಾಡಿದ್ರೆ …ಇನ್ನು ಕೆಲವ್ರು ಇವ್ರು ಸಪ್ತಮಿ ಗೌಡ ಅಲ್ಲ ಬಿಡಿ ಅಂತಿದ್ದಾರೆ..ಕಾಂತಾರದ ಚೆಲುವೆ ಟ್ರೆಡಿಷನಲ್ ಆಗಿ ಕಾಣಿಸಿಕೊಂಡ್ರೆನೇ ಚಂದ ಅನ್ನೋದು ಅವ್ರ ಅಭಿಮಾನಿಗಳ ಅಭಿಪ್ರಾಯ …ಆದ್ರೆ ಸಪ್ತಮಿ ಗೌಡ ಹೀರೋಯಿನ್ ಅಂದ್ಮೆಲೆ ಎಲ್ಲಾ ರೀತಿ ಕಾಣಿಸಿಕೊಳ್ಳಬೇಕು ಅನ್ನೋ ಲೆಕ್ಕಾಚಾರದಲ್ಲಿ ಇದ್ದಾರೆ…ಅದೇನೇ ಆಗಲಿ ನಾಯಕಿ ಅಂದ್ಮೆಲೆ ಚೆನ್ನಾಗಿ ಕಾಣಿಸಿದ್ರೆ ಒಳ್ಳೇದು….
