ರೈಡರ್ ನಿಖಿಲ್ ರೈಡ್ ಮಾಡೋಕೆ ರೆಡಿ, ಸೈಡ್ ನಲ್ಲಿ ಇದ್ದು ಬಿಡಿ..!!

ಯುವರಾಜ ನಿಖಿಲ್ ಕುಮಾರಸ್ವಾಮಿ ಇಂದು ಸರಳವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳುತ್ತಿದ್ದಾರೆ. ಹುಟ್ಟು ಹಬ್ಬದ ದಿನ ನಿಖಿಲ್ ಅಭಿನಯದ ಹೊಸ ಸಿನಿಮಾ ರೈಡರ್ ಟೀಸರ್ ರಿಲೀಸ್ ಆಗಿದೆ. ಮತ್ತೊಂದು ಕಂಪ್ಲೀಟ್ ಎಂಟರ್ ಟೈನರ್ ಸಿನಿಮಾದ ಆಕ್ಷನ್ ಪ್ಯಾಕ್ಡ್ ಟೀಸರ್ ಸಿನಿಮಾದ ಕ್ವಾಲಿಟಿ ತೋರಿಸ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರಲಿದೆ ರೈಡರ್.


ಚಂದ್ರು ಮನೋಹರನ್, ಲಹರಿ ಫಿಲಮ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡ್ತಿರೋ ಸಿನಿಮಾಕ್ಕೆ ವಿಜಯ್ ಕುಮಾರ್ ಕೊಂಡ ಡೈರೆಕ್ಷನ್ ಇದೆ. ರೈಡರ್ ಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಇದೇ ಮೊದಲ ಬಾರಿಗೆ ಬೇರೊಬ್ಬ ನಿರ್ಮಾಪಕರ ಸಿನಿಮಾದಲ್ಲಿ ನಿಖಿಲ್ ನಾಯಕನಟನಾಗಿ ಕಾಣಿಸಿಕೊಳ್ತಾ ಇದ್ದಾರೆ. ಚಿತ್ರಕ್ಕೆ ಕಶ್ಮೀರಾ ಪರದೇಶಿ ನಾಯಕಿ.
ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಸಿನಿಮಾದ ತಾರಗಣದಲ್ಲಿದ್ದಾರೆ. ಈ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದ್ದು, ಶೀಘ್ರದಲ್ಲಿ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.