ದರ್ಶನ್ ನಂತ್ರ ಶುರುವಾಯ್ತು ಫ್ಯಾನ್ಸ್ ಗಳ ಟ್ಯಾಟು ಸಂಭ್ರಮ

ದರ್ಶನ್ ಇತ್ತೀಚಿಗಷ್ಟೇ ತನ್ನ ಎದೆಯ ಮೇಲೆ ನನ್ನ ಸೆಲೆಬ್ರಿಟಿಸ್ ಅಂತ ಹಚ್ಚೆ ಹಾಕಿಸಿಕೊಂಡಿದ್ದರು…ದರ್ಶನ್ ಹಚ್ಚೆ ಹಾಕಿಸಿಕೊಂಡ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ಈಗ ಅಭಿಮಾನಿಗಳು ಹಚ್ಚೆ ಹಾಕಿಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದಿದ್ದಾರೆ..
ದರ್ಶನ್ ನನ್ನ ಪ್ರೀತಿಯ ಸೆಲೆಬ್ರಿಟಿ ಎನ್ನುವ ಅರ್ಥದಲ್ಲಿ ಅಚ್ಚೆ ಹಾಕಿಸಿಕೊಂಡಿದ್ದರು ಈಗ ಅವರ ಅಭಿಮಾನಿಗಳು ಕೂಡ ತಮ್ಮ ಎದೆಯ ಮೇಲೆ ಡಿ ನನ್ನ ದೇವರು ಎಂದು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ದರ್ಶನ್ ಹುಟ್ಟುಹಬ್ಬ ಇರುವ ಕಾರಣ ಹಚ್ಚೆ ಹಾಕಿಸಿಕೊಂಡು ದರ್ಶನ್ ಅವ್ರಿಗೆ ಸರ್ ಪ್ರೈಸ್ ನೀಡಬೇಕು ಅನ್ನೋದು ಫ್ಯಾನ್ಸ್ ಪ್ಲಾನ್…ಇನ್ನು ಬರ್ತಡೇ ವಿಶೇಷವಾಗಿ ಡಿ 56 ಸಿನಿಮಾದ ಟೈಟಲ್ ಕೂಡ ರಿವಿಲ್ ಆಗಲಿದೆ

ಡಿ 56 ಸಿನಿಮಾವನ್ನ ತರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ರಾಕ್ಲೈನ್ ವೆಂಕಟೇಶ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.. ಈಗಾಗಲೇ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಪೋಸ್ಟರ್ ವಿಭಿನ್ನವಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ..ಡಿ56 ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿರುವ ಚಿತ್ರತಂಡ ಆದೆಷ್ಟು ಬೇಗ ಚಿತ್ರಿಕರಣ ಮುಗಿಸಿ ಪ್ರೇಕ್ಷಕರ ಮುಂದೆ ಸಿನಿಮಾ ತರುವ ತಯಾರಿ ನಡೆಸುತ್ತಿದೆ…