ಉತ್ತಮರು ಕನ್ನಡದ ಕಲ್ಟ್ ಕ್ಲಾಸಿಕ್ ಚಿತ್ರ

ಕೆಲವು ಸಿನಿಮಾಗಳು ತನ್ನ ಶೀರ್ಷಿಕೆಯಿಂದ ಸುದ್ದಿಯಾದರೆ, ಕೆಲವು ಸಿನಿಮಾಗಳು ತನ್ನ ವಿಭಿನ್ನವಾದ ನಿರೂಪಣೆ ಮತ್ತು ಚಿತ್ರದ ಮೇಕಿಂಗ್ಸ್ ನಿಂದ ಸುದ್ದಿಯಾಗುತ್ತವೆ ಇಂತಹ ಸಾಲಿನಲ್ಲಿ ನಿಲ್ಲುವಂತಹ ಕನ್ನಡದ ಕಲ್ಟ್ ಕ್ಲಾಸಿಕ್ ಚಿತ್ರ,ಉತ್ತಮರು. ಗಾಂಧಿನಗರದ ಫಾರ್ಮುಲಾ ಪ್ರಕಾರ ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು,ಒಂದು ಶಿಸ್ತುಬದ್ಧ ಶೀರ್ಷಿಕೆಯ ಅಡಿಯಲ್ಲಿ ಹೊರಬಂದ ಉತ್ತಮರು ಚಿತ್ರದ ಕ್ಲಿಪಿಂಗ್ಸ್ ನೋಡಿದಾಗ ಎಲ್ಲರೂ ಒಂದು ಸಾರಿ ಮೂಗಿನ ಮೇಲೆ ಬೆರಳು ಇಟ್ಟು ಕೊಳ್ಳೋದು ಗ್ಯಾರಂಟಿ.
ಹೌದು ವೀಕ್ಷಕರೇ,ಉತ್ತಮರು ಟೀಸರ್,ಸಾಂಗ್ಸ್ ಮತ್ತು ಇನ್ನಿತರ ವಿಡಿಯೋ ಕ್ಲೀಪಿಂಗ್ಸ್ ನೋಡಿದಾಗ ಇದೊಂದು ಕಂಪ್ಲೀಟ್ ರಾ ಕಂಟೆಂಟ್ ಇರೋ ಚಿತ್ರ ಎಂಬುದು ಸತ್ಯವಾಗಿಯೂ ಸಾಭಿತಾಗುತ್ತದೆ.
ಚಿತ್ರದ ನಾಯಕ ನಟ ಹೇಳುವಂತೆ ಹಿಂದಿಯಲ್ಲಿ ಬಂದಂತಹ ಸತ್ಯ ಮತ್ತು ಡಿ ಕಂಪನಿ ಶೈಲಿಯಲ್ಲೇ ಉತ್ತಮರು ಬಂದಿದ್ದು,ಹಣ ಮತ್ತು ಅಧಿಕಾರಕ್ಕಾಗಿ ದುಡ್ಡು ಇದ್ದವರು ಹಾಗೂ ರಾಜಕಾರಣಿಗಳು ಹೇಗೆಲ್ಲ ಅಮಾಯಕರನ್ನು ತಮ್ಮ ಬಲೆಗೆ ಬೀಳಿಸಿಕೊಂಡು,ಹಣದ ರುಚಿ ತೋರಿಸಿ ತಮ್ಮ ವಶದಲ್ಲೆ ಇಟ್ಟುಕೊಳ್ಳುತ್ತಾರೆ ಎಂಬುದನ್ನ ಕಾಲ್ಪನಿಕ ಕಥೆಯಾಗಿ ಹೇಳಲಾಗಿದೆ ಎನ್ನುತ್ತಾರೆ.
ರೋಹಿತ್ ಶ್ರೀನಿವಾಸ್ ರವರು ಕಥೆ,ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿರುವ ಉತ್ತಮರು ಚಿತ್ರಕ್ಕೆ ಪ್ರೇಕ್ಷಕ ಮಹಾ ಪ್ರಭುಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು ಚಿತ್ರ ತಂಡಕ್ಕೆ ಸಂತಸ ತಂದಿದೆ..
ಚಿತ್ರದ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿರುವ ಪ್ರತಾಪ್,ಪಲ್ಲವಿ,ರಂಗಾಯಣ ರಘು,ಕಡ್ಡಿಪುಡಿ ಚಂದ್ರು, ಶ್ರೀಧರ್,ಆರ್ಯದೇವ್ ಎಲ್ಲರಿಗೂ ಉತ್ತಮರು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದು ಚಿತ್ರವು ಯಶಸ್ವಿಯಾಗುತ್ತದೆ ಎಂಬ ಭರವಸೆಯಲ್ಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ.
ಕರ್ನಾಟಕದ ಎಲ್ಲ ಪ್ರೇಕ್ಷಕ ಪ್ರಭುಗಳು ಉತ್ತಮರು ಚಿತ್ರವನ್ನು ನೋಡಿ ಗೆಲ್ಲಿಸಿ.
ರವೀ ಸಾಸಾನೂರ್
ಕನ್ನಡ ಪಿಚ್ಚರ್