News

ಏ.‌1ಕ್ಕೆ ಯುವರತ್ನ, ಡಿಸೆಂಬರ್‌ ನಲ್ಲಿ ಜೇಮ್ಸ್‌ ರಿಲೀಸ್‌..!

ಏ.‌1ಕ್ಕೆ ಯುವರತ್ನ, ಡಿಸೆಂಬರ್‌ ನಲ್ಲಿ ಜೇಮ್ಸ್‌ ರಿಲೀಸ್‌..!
  • PublishedJanuary 14, 2021

ಕರೋನಾ ಪ್ಯಾನ್‌ ಡೆಮಿಕ್‌ನಿಂದ ಬಹುತೇಕ ೨೦೨೦ ವರ್ಷ ಪೂರ್ತಿ ಸಿನಿಮಾಗಳ ರಿಲೀಸ್‌ ಇಲ್ಲದೆ, ಇಡೀ ಸ್ಯಾಂಡಲ್‌ವುಡ್‌ ನಿಂತ ನೀರಾಗಿತ್ತು, ಈ ನಿಂತ ನೀರಿಗೆ ಕರೆಂಟ್‌ ಪಾಸ್‌ ಮಾಡುವಂತೆ, ಪ್ಯಾನ್‌ಡೆಮಿಕ್‌ ನಂತ್ರ ತಮ್ಮ ಯುವರತ್ನ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ರು ಪುನೀತ್‌ ರಾಜ್‌ ಕುಮಾರ್‌. ಪವರ್‌ ಸ್ಟಾರ್‌ ನ ಈ ದಿಟ್ಟ ಹೆಜ್ಜೆಯಿಂದ ಕನ್ನಡದಲ್ಲಿ ಮತ್ತಷ್ಟು ಬಿಗ್‌ ಸಿನಿಮಾಗಳು ತಮ್ಮ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ವು. ಸ್ತಬ್ಧವಾಗಿದ್ದ ಚಿತ್ರೋದ್ಯಮಕ್ಕೆ ಸಂಜೀವಿನಿಯಾದ್ರೂ ದೊಡ್ಮನೆ ಹುಡುಗ ಪುನೀತ್‌.

ಏಪ್ರಿಲ್‌ ೧ಕ್ಕೆ ಹೊಂಬಾಳೆ ಫಿಲಮ್ಸ್‌ ಬ್ಯಾನರ್‌ ನಲ್ಲಿ ನಿರ್ಮಾಣವಾಗಿರೋ, ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ಯುವರತ್ನ ಏಪ್ರಿಲ್‌ 1ಕ್ಕೆ ತೆರೆಗೆ ಬರಲಿದೆ. ಸಂತೋಷ್‌ ಆನಂದ್‌ ರಾಮ್‌ ಹಾಗೂ ಪುನೀತ್‌ಕಾಂಬಿನೇಷನ್‌ ಸಿನಿಮಾ ರಾಜಕುಮಾರ ಸೂಪರ್‌ ಹಿಟ್‌ ಆಗಿದ್ದ ಹಿನ್ನೆಲೆಯಲ್ಲಿ ಯುವರತ್ನ ಸಿನಿಮಾಕ್ಕೆ ಭರ್ಜರಿ ನಿರೀಕ್ಷೆಗಳಿವೆ. ನಿರೀಕ್ಷಯಂತೆಯೆ ಸಿನಿಮಾದ 2 ಹಾಡುಗಳು ರಿಲೀಸ್‌ ಆಗಿ ಜನರ ಮೆಚ್ಚುಗೆ ಗಳಿಸಿವೆ.

ಈಗ ಪುನೀತ್‌ ಅಭಿಮಾನಿಗಳಿಗೆ ಮತ್ತೊಂದು ಖುಷಿ ವಿಷಯ ಸಿಕ್ಕಿದೆ, ಬಹದ್ದೂರ್‌ ಚೇತನ್‌ ಆಕ್ಷನ್‌ ಕಟ್‌ ಹೇಳ್ತಿರೋ ಪುನೀತ್‌ರ ಮುಂದಿನ ಸಿನಿಮಾ ಜೇಮ್ಸ್‌ ಕೂಡ ಈ ವರ್ಷವೇ ರಿಲೀಸ್‌ ಆಗಲಿದೆ. ಜೇಮ್ಸ್‌ ಸಿನಿಮಾದ ಶೂಟಿಂಗ್‌ ಭರದಿಂದ ಸಾಗಿದ್ದು, ಈ ವರ್ಷವೇ ಡಿಸೆಂಬರ್‌ ನಲ್ಲಿ ತೆರೆಗೆ ತರಲು ಪ್ಲಾನ್‌ ಮಾಡಿಕೊಳ್ತಿದೆ ಸಿನಿಮಾ ಟೀಮ್. ಲಕ್ಕಿ ಡಿಸೆಂಬರ್‌ ನಲ್ಲಿ ಜೇಮ್ಸ್‌ ರಿಲೀಸ್‌ ಮಾಡುವ ಸಲುವಾಗಿ ಸಿನಿಮಾದ ಶೂಟಿಂಗ್‌ ಈಗ ವೇಗ ಪಡೆದುಕೊಂಡಿದೆ.

ಈ ಸಿನಿಮಾಗಳ ಜೊತೆಗೆ ಹೊಸಬರಿಗೆ ಮಾತ್ರ ಅವಕಾಶ ನೀಡುವ ಉದ್ದೇಶದಿಂದ ಸದಭಿರುಚಿ ಸಿನಿಮಾಗಳನ್ನ ನಿರ್ಮಾಣ ಮಾಡಿಕೊಂಡು ಬರ್ತಿರೋ ಪಿಆರ್‌ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಇನ್ನೂ ೩ ಸಿನಿಮಾಗಳು ಈ ವರ್ಷ ಜನರನ್ನ ರಂಜಿಸಲು ರೆಡಿಯಾಗ್ತಿವೆ. ಸದ್ಯ ಕರೋನಾ ಭಯ ನಿಧಾನವಾಗಿ ಸರಿಯುತ್ತಿದ್ದು, ಭರ್ಜರಿ ಮನೋರಂಜನೆ ನೀಡಲು ಪುನೀತ್‌ ಪ್ಯಾಕೇಜ್‌ನೆ ರೆಡಿ ಮಾಡಿಕೊಂಡಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *