ಹಿರಿಯ ಹಾಸ್ಯ ಕಲಾವಿದ ಗಂಡಸಿ ನಾಗರಾಜ್ ನಿಧನ

ನವರಸ ನಾಯಕ ಜಗ್ಗೇಶ್ ಅಭಿನಯದ ಸಾಕಷ್ಟು ಸಿನಿಮಾಗಳಲ್ಲಿ ಸಹ ಹಾಸ್ಯ ಕಲಾವಿದರಾಗಿ ಗುರುಸಿಕೊಂಡಿದ್ದ, ವಸ್ತ್ರಾಲಂಕಾರ ಕಲಾವಿದರು ಹಾಗು ಹಾಸ್ಯ ಕಲಾವಿದರು ಗಂಡಸಿ ನಾಗರಾಜ್ ನಿನ್ನೆ ಬೆಳಗ್ಗೆ 10.30ರ ಸುಮಾರಿಗೆ ನಿಧನರಾಗಿದ್ದಾರೆ. ಸುಮಾರು 40 ವರ್ಷಗಳ ಕನ್ನಡ ಚಿತ್ರ ರಂಗದ ಕಲಾ ಸೇವೆಯನ್ನು ಮಾಡಿರೋ ಗಂಡಸಿ ನಾಗರಾಜ್ ಜಗ್ಗೇಶ್ ರವರ ಆಪ್ತ ವಸ್ತ್ರಾಲಂಕಾರ ಕಲಾವಿದರಾಗಿದರು.
ಗಂಡಸಿ ನಾಗರಾಜ್ ರವರು ನಟಿಸಿ, ಕಾಸ್ಟ್ಯೂಮರ್ ಆಗಿ ಕೆಲಸ ಮಾಡಿದ ಚಿತ್ರಗಳಲ್ಲಿ ಸರ್ವರ್ ಸೋಮಣ್ಣ , ಸೂಪರ್ ನನ್ನ ಮಗ, ಬಂಡ ನನ್ನ ಗಂಡ , ಗುಂಡನ ಮದುವೆ , ರಾಯರ ಮಗ , ಹಬ್ಬ , ಶ್ರೀ ಮಂಜುನಾಥ , ಮದುವೆ , ಮಾತಾಡು ಮಾತಾಡು ಮಲ್ಲಿಗೆ , ಪರ್ವ , ರಾಜಹುಲಿ, ಶಿಕಾರಿ ಹೀಗೆ 1000 ಕ್ಕು ಹೆಚ್ಚು ಚಿತ್ರಗಳ ಕಲಾ ಸೇವೆ ಮಾಡಿದ್ದಾರೆ. ಕೋಟಿಗೋಬ್ಬ 3 ಗಂಡಸಿ ನಾಗರಾಜ್ ಅವ್ರು ಕೆಲಸ ಮಾಡಿದ ಕೊನೆಯ ಸಿನಿಮಾ