ದಿಲ್ ಪಸಂದ್ ಟ್ರೈಲರ್ ಬಲ್ ಪಸಂದಗೈತೆ..!

ಡಾರ್ಲಿಂಗ್ ಕೃಷ್ಣ ಅಂದ್ರೆ ಈಗ ಒಂದಕ್ಕಿಂತ ಹೆಚ್ಚು ಹೀರೋಯಿನ್ಗಳ ಜೊತೆ ಕೃಷ್ಣ ಲೀಲೆ ತೋರಿಸೋ ಹೀರೋ ಅಂತಲೇ ಫಿಕ್ಸ್ ಆಗಿರೋ ಹೀರೋ ಅಂತಿದ್ದವರಿಗೆ, ಒಂದೊಳ್ಳೆ ಮಾಸ್ ಎಂಟರ್ಟೈನ್ಮೆಂಟ್ ಜೊತೆಗೆ ಸಖತ್ತಾಗಿ ಮೆಸೇಜ್ ಹೇಳೋಕೆ ಹೊರಟಿರೋ ಸಿನಿಮಾ ದಿಲ್ ಪಸಂದ್. ಟೀಸರ್ ನಲ್ಲಿ ನಿಶ್ವಿಕಾ, ಕೃಷ್ಣರ ರೊಮ್ಯಾಂಟಿಕ್ ಸೀನ್ಗಳನ್ನ ನೋಡಿ ಇದು ಪಡ್ಡೆ ಹೈಕ್ಳ ಫೇವರಿಟ್ ಸಿನಿಮಾ ಅಂದುಕೊಂಡಿದ್ದವರಿಗೆ ಟ್ರೇಲರ್ ನೋಡಿದ ಇದೊಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಅನ್ನೋದು ಖಾತ್ರಿಯಾಗಿದೆ. ಕಾಮಿಡಿ, ರೊಮ್ಯಾನ್ಸ್ ಜೊತೆಗೆ ಸರಳವಾದ ಫ್ಯಾಮಿಲಿ ಸೆಂಟಿಮೆಂಟ್ಸ್ ಇಟ್ಟು ಮತ್ತೊಂದು ಆಲ್ರೌಂಡ್ ಎಂಟರ್ಟೈನಿಂಗ್ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಿವ ತೇಜಸ್..!
ಅಯ್ಯೋ ರಾಮಾ ರಾಮಾ ಅನ್ನೋ ಟ್ರೆಂಡಿಂಗ್ ಹಾಡು, ಟೀಸರ್ನಲ್ಲಿ ತಮ್ಮ ಬೋಲ್ಡ್ ಅವತಾರ ತೋರಿದ್ದ ನಿಶ್ವಿಕಾ ನಾಯ್ಡು, ತಾನು ಸಿನಿಮಾದಲ್ಲಿ ಬೋಲ್ಡ್ ನೆಸ್ ಜೊತೆಗೆ ಎಮೋಷನಲ್ ಸೀನ್ನಲ್ಲೂ ಸಖತ್ತಾಗೇ ಸ್ಕೋರ್ ಮಾಡಿದ್ದೀನಿ ಅಂತ ಟ್ರೇಲರ್ನಲ್ಲೇ ತೋರಿಸಿದ್ದಾರೆ. ಟೀಸರ್ನಲ್ಲಿ ಡೀಸೆಂಟ್ ಗೌರಮ್ಮನಾಗಿದ್ದ ಮೇಘ ಶೆಟ್ಟಿ ತಮ್ ಗ್ಲಾಮ್ ಲುಕ್ ಕೂಡ ತೋರಿಸಿದ್ದಾರೆ. ಇನ್ನು ಕೃಷ್ಣ ಇಲ್ಲೊಬ್ಬ ಪ್ಲೇ ಬಾಯ್ ಅಂದುಕೊಂಡವರಿಗೆ, ಈಗಿನ ಜನರೇಷನ್ನ ಎಲ್ಲಾ ಯುವಕರ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ನಲ್ಲಿ ಹಾಡುಗಳ ಬಗ್ಗೆ ಕೂಡ ನಿರೀಕ್ಷೆ ಇಟ್ಕೊಳಬಹುದು.

ಸ್ವತಃ ನಿರ್ದೇಶಕರೂ ಆಗಿರೋ ಸುಮಂತ್ ಕ್ರಾಂತಿ ನಿರ್ಮಾಣದಲ್ಲೂ ತಮ್ಮ ಕ್ರಿಯೇಟಿವಿಟಿ ತೋರಿಸಿರೋದು ಎದ್ದು ಕಾಣ್ತಿದೆ. ಈ ದೊಡ್ಡ ಸ್ಟಾರ್ ಕಾಸ್ಟ್ ನ ಮೇಲೆ ಸಿಲ್ವರ್ ಕೋಟಿಂಗ್ ಥರಾ ಕೃಷ್ಣ ಅಜಯ್ ರಾವ್ ಕೂಡ ವಿಶೇಷ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಕಕೊಂಡಿದ್ದಾರೆ, ಈ ಝಲಕ್ ಟ್ರೇಲರ್ ನಲ್ಲಿದೆ. ಇಷ್ಟೆಲ್ಲಾ ಭರಪೂರ ಎಂಟರ್ಟೈನ್ಮೆಂಟ್ನ ಪ್ಯಾಕೇಜ್ ಆಗಿರೋ ದಿಲ್ಪಸಂದ್ ಇದೇ ನವೆಂಬರ್ 11ಕ್ಕೆ ತೆರೆಗೆ ಬರ್ತಾ ಇದ್ದು. ಟೀಸರ್ಗೂ ಟ್ರೇಲರ್ಗೂ ವ್ಯತ್ಯಾಸ ಇರೋ ಹಾಗೆ, ಟ್ರೇಲರ್ ಗಿಂತ ಸಿನಿಮಾ ಅನ್ಲಿಮಿಟೆಡ್ ಮನರಂಜನೆ ನೀಡೋದು ಪಕ್ಕಾ.
ಕನ್ನಡ ಪಿಚ್ಚರ್