ಪಿಚ್ಚರ್ SPECIAL ಪಿಚ್ಚರ್ UPDATE

ಹೆಡ್‌ ಬುಷ್‌ ವಿವಾದ ರಿಷಬ್‌ ಗೆ ತರಾಟೆ ತೆಗೆದುಕೊಂಡ ಫ್ಯಾನ್ಸ್‌

ಹೆಡ್‌ ಬುಷ್‌ ವಿವಾದ ರಿಷಬ್‌ ಗೆ ತರಾಟೆ ತೆಗೆದುಕೊಂಡ ಫ್ಯಾನ್ಸ್‌
  • PublishedOctober 28, 2022

ಡಾಲಿ ಧನಂಜಯ್‌ ಅಭಿನಯದ ಹೆಡ್‌ ಬುಷ್‌ ಸಿನಿಮಾ ವಿವಾದಲ್ಲಿ ಸಿಲುಕಿರೋದು ಗೊತ್ತೆ ಇದೆ…ಕಳೆದ ಎರಡು ದಿನಗಳಿಂದ ಸಿನಿಮಾದಲ್ಲಿ ಆ ತಪ್ಪಿದೆ ಈ ತಪ್ಪಿಗೆ ಎಂದು ಒಬ್ಬರಾದ ನಂತ್ರ ಮತ್ತೊಬ್ಬರು ಬರ್ತಾನೇ ಇದ್ದಾರೆ…ಈ ಮಧ್ಯೆ ಡಾಲಿ ಬೆಂಬಲಕ್ಕೆ ಫ್ಯಾನ್ಸ್‌ ನಿಂತಿದ್ದು ಮತ್ತೆ ಮತ್ತೆ ಸಿನಿಮಾ ನೋಡುವ ಮೂಲಕ ಧನಂಜಯ ಅವ್ರನ್ನ ಬೆಂಬಲಿಸುತ್ತಿದ್ದಾರೆ…

ಇನ್ನೊಂದೆಡೆ ಬಡವರ ಮಕ್ಕಳು ಬೆಳಿಯಬೇಕು ಅನ್ನೋ ಹ್ಯಾಷ್‌ ಟ್ಯಾಗ್‌ ಮತ್ತು ಫೋಟೋ ಹಾಕಿಕೊಂಡು ಡಾಲಿ ಪರವಾಗಿ ಅಭಿಮಾನಿಗಳು ಬ್ಯಾಟಿಂಗ್‌ ಮಾಡ್ತಿದ್ದಾರೆ…ಸಿನಿಮಾ ರಿಲೀಸ್‌ , ಪ್ರಮೋಷನ್‌ ಎಲ್ಲದರ ಮಧ್ಯೆಯೂ ಧನಂಜಯ್‌ ಕಾಂತಾರ ಸಿನಿಮಾ ನೋಡಿ ಟ್ವೀಟ್‌ ಮಾಡಿದ್ರು..ಸಿನಿಮಾ ಕಂಟೆಂಟ್‌ ಹಾಗೂ ರಿಷಬ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು…

ಆದ್ರೆ ರಿಷಬ್‌ ಮಾತ್ರ ಹೆಡ್‌ ಬುಷ್‌ ಬಗ್ಗೆ ಎಲ್ಲಿಯೂ ಮಾತಾಡ್ತಿಲ್ಲ…ಕಾಂತಾರ ಚಿತ್ರ ಕೂಡ ವಿವಾದಕ್ಕೆ ಸಿಲುಕಿತ್ತು ಈಗ ಹೆಡ್‌ ಬುಷ್‌ ಸಿಲುಕಿದೆ..ಇಬ್ಬರು ಒಂದೇ ಪರಿಸ್ಥಿತಿಯಲ್ಲಿ ಇದ್ದಾಗ ಸಹ ಕಲಾವಿದರ ಸಹಾಯಕ್ಕೆ ನಿಲ್ಲೋದು ಪ್ರತಿ ಕಲಾವಿದರ ಕರ್ತವ್ಯ ದ್ರೆ ರಿಷಬ್‌ ಮಾತ್ರ ಮಾತಾಡುತ್ತಿಲ್ಲ ಯಾಕೆ ಅನ್ನೋದು ಫ್ಯಾನ್ಸ್‌ ಪ್ರಶ್ನೆ..ಅದ್ರ ಜೊತೆಗೆ ರಿಷಬ್‌ ಅವ್ರಿಗೆ ಅಭದ್ರತೆ ಕಾಡ್ತಿರಬಹುದು ಹಾಗಾಗಿ ಮಾತಾಡುತಿಲ್ಲ ಎಂದಿದ್ದಾರೆ…ಒಟ್ಟಾರೆ ಅದೇನೆ ಇರಲಿ ಇಂಡಸ್ಟ್ರಿ ಅಂದಮೇಲೆ ಎಲ್ಲರೂ ಒಟ್ಟಿಗೆ ಇರಬೇಕು ಒಟ್ಟಿಗೆ ಬೆಳಿಯಬೇಕು….

Written By
Kannadapichhar