ಪಿಚ್ಚರ್ SPECIAL ಪಿಚ್ಚರ್ UPDATE

ಟ್ವಿಟ್ಟರ್‌ ನಲ್ಲಿ ಪುನೀತ್‌ ಜೊತೆ ಸುದೀಪ್‌ ಕೂಡ ಟ್ರೆಂಡಿಂಗ್‌ ಯಾಕೆ ಗೊತ್ತಾ ?

ಟ್ವಿಟ್ಟರ್‌ ನಲ್ಲಿ ಪುನೀತ್‌ ಜೊತೆ ಸುದೀಪ್‌ ಕೂಡ ಟ್ರೆಂಡಿಂಗ್‌ ಯಾಕೆ ಗೊತ್ತಾ ?
  • PublishedOctober 28, 2022

ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಗಂಧದಗುಡಿ ಸಿನಿಮಾ ರಿಲೀಸ್‌ ಆಗಿದೆ…ಸಿನಿಮಾ ನೋಡಿದ ಪ್ರತಿಯೊಬ್ಬರು ಕಣ್ತುಂಬಿಕೊಂಡು ಥಿಯೇಟರ್‌ ನಿಂದ ಹೊರ ಬರ್ತಿದ್ದಾರೆ…ಚಿತ್ರ ನೋಡಿದ ನಂತ್ರ ಫ್ಯಾನ್ಸ್‌ ತಮ್ಮ ಅಭಿಪ್ರಾಯನ್ನ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಳ್ತಿದ್ದಾರೆ…ವಿಶ್ವದಾಧ್ಯಂತ ಸಿನಿಮಾ ತೆರೆ ಕಂಡಿದ್ದು ಎಲ್ಲೆಡೆ ಗಂಧದಗುಡಿ ಬಗ್ಗೆಯೇ ಚರ್ಚೆ ಆಗ್ತಿದೆ..ಹಾಗಾಗಿ ಟ್ವಿಟ್ಟರ್‌ ನಲ್ಲಿ ಪುನೀತ್‌ ರಾಜ್‌ ಕುಮಾರ್‌ ಟ್ರೆಂಡಿಂಗ್‌ ನಲ್ಲಿದ್ದಾರೆ…ಆದ್ರೆ ಅಪ್ಪು ಜೊತೆ ಕಿಚ್ಚ ಸುದೀಪ್‌ ಕೂಡ ಟ್ರೆಂಡಿಂಗ್‌ ನಲ್ಲಿದ್ದಾರೆ ಅನ್ನೋದೇ ವಿಶೇಷ….

ಯೆಸ್‌ ಪುನೀತ್‌ ಅವ್ರ ಜೊತೆ ಸುದೀಪ್‌ ಟ್ರೆಂಡಿಗ್‌ ನಲ್ಲಿರೋದಕ್ಕೆ ಕಾರಣ ಒಂದು ಗಂಧದಗುಡಿ ಮತ್ತೊಂದು ಕಾರಣ ಡಾಲಿ ಧನಂಜಯ್‌ …ಸುದೀಪ್‌ ಗಂಧದಗುಡಿ ನಬಗ್ಗೆ ಟ್ವೀಟ್‌ ಮಾಡಿದ್ದು ಸಖತ್‌ ಟ್ರೇಂಡ್‌ ಆಗಿದೆ…ಅದ್ರ ಜೊತೆಗೆ ಧನಂಜಯ್‌ ವ್ರನ್ನ ಒಂದು ಕಾರ್ಯಕ್ರಮದಲ್ಲಿ ಸುದೀಪ್‌ ತಮ್ಮ ಪಕ್ಕಕ್ಕೆ ಕರೆದು ನಿಲ್ಲಿಸಿಕೊಳ್ತಾರೆ..ಆ ವಿಡಿಯೋ ಈಗ ವೈರಲ್‌ ಆಗ್ತಿದೆ…ಅದ್ರ ಜೊತೆ ಕ್ರಿಕೆಟ್‌ ಲೀಗ್‌ ಸಮಾರಂಭದಲ್ಲಿ ಅಪ್ಪು ಅವ್ರನ್ನ ಕರೆದು ಮಾತನಾಡಿಸ್ತಾರೆ ಸದ್ಯ ಈ ವಿಡಿಯೋಗಳು ವೈರಲ್‌ ಆಗ್ತಿರೋ ಕಾರಣ ಅಪ್ಪು ಮತ್ತು ಕಿಚ್ಚ ಇವತ್ತಿನ ಟ್ವಿಟ್ಟರ್‌ ಟ್ರೆಂಡಿಂಗ್‌ ನಲ್ಲಿದ್ದಾರೆ….


https://twitter.com/Mahi_Kiccha_/status/1585826077678583809
Written By
Kannadapichhar