ಚಿತ್ರರಂಗದಲ್ಲಿಲ್ವಾ ಒಗ್ಗಟ್ಟು , ಸಾಕ್ಷಿ ಹೇಳ್ತಿದ್ದಾರೆ ಮನ್ಸೋರೆ, ಸುಮನಾ ಕಿತ್ತೂರು

ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ವಿವಾದದಲ್ಲಿ ಸಿಲುಕಿಕೊಂಡಿದೆ…ಸಿನಿಮಾದ ಸಕ್ಸಸ್ ಎಫೆಕ್ಟೋ, ವಯಕ್ತಿಕ ದ್ವೇಷವೋ ಗೊತ್ತಿಲ್ಲ…ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದೀರ…ವೀರಗಾಸೆ ಕುಣಿತ ಮಾಡೋರಿಗೆ ಚಪ್ಪಲಿ ಹಾಕಿಕೊಂಡು ಒದ್ದಿದ್ದೀರ ಎಂದು ಆರೋಪಿಸಿ ವಿವಾದ ಸೃಷ್ಟಿ ಮಾಡಿದ್ದಾರೆ…ಈ ವಿಚಾರವಾಗಿ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದ್ದು ಇಂತಹ ಸಂದರ್ಭದಲ್ಲಿ ಕನ್ನಡ ಇಂಡಸ್ಟ್ರಿ ಒಟ್ಟಾಗಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ…ವಿಮರ್ಶಕರೊಬ್ಬರು ಈ ಬಗ್ಗೆ ಬರೆದಿದ್ದು ಡಾಲಿ ಸಪೋರ್ಟಿಂಗೆ ನಿಂತಿದ್ದಾರೆ..

ಆದ್ರೆ ಯಾರು ಯಾರ ಸಹಾಯಕ್ಕೂ ಬರಲ್ಲ ಬಿಡಿ ಸಾರ್ ಅಂತಿದ್ದಾರೆ ಸ್ಯಾಂಡಲ್ ವುಡ್ ನ ನಿರ್ದೇಶಕ ಮನ್ಸೋರೆ ಹಾಗೂ ಸುಮನಾ ಕಿತ್ತೂರು..ಯೆಸ್ ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಕಮೆಂಟ್ ಮಾಡಿರೋ ಡೈರೆಕ್ಟರ್ ಮನ್ಸೋರೆ ́ʼʼಚಿತ್ರರಂಗದಲ್ಲಿರುವವರು ಯಾವಾಗಲೂ ಗಾಢ ನಿದ್ದೆಯಲ್ಲಿ ಇರ್ತಾರೆ ಸರ್, ಅವರ ಬುಡಕ್ಕೆ ಬೆಂಕಿ ಬಿದ್ದಾಗ ಎದ್ದೇಳ್ತಾರೆ, ಆಮೇಲೆ ಬೆಡ್ಶೀಟ್ ಹೊದ್ಕೊಂಡು ಮಲ್ಕೋತಾರೆ. ಅಷ್ಟೇ.ʼʼ ಎಂದಿದ್ದಾರೆ ಅದಕ್ಕೆ ಸುಮನಾ ಕಿತ್ತೂರು ಸತ್ಯವಾದ ಮಾತು ಎಂದಿದ್ದಾರೆ….

ಇನ್ನು ಸೋಷಿಯಲ್ ಮಿಡಿಯಾದಲ್ಲಿ ವಿ ಸ್ಟ್ಯಾಂಡ್ ವಿತ್ ಧನಂಜಯ , ವಿ ಸಪೋರ್ಟ್ ಧನಂಜಯ ಅನ್ನೋ ಅಭಿಯಾನ ಶುರುವಾಗಿದ್ದು ಡಾಲಿ ಅಭಿಮಾನಿಗಳು ಒಳ್ಳೆ ಸಿನಿಮಾ ಗೆಲ್ಲಬೇಕು ಎಂದು ಅವ್ರ ಬೆನ್ನಿಗೆ ನಿಂತಿದ್ದಾರೆ…