ಹೆಡ್ ಬುಷ್ ಬಾಕ್ಸ್ ಆಫೀಸ್ ದಾಖಲೆ, 3 ದಿನದ ಕಲೆಕ್ಷನ್ಸ್ 9ಕೋಟಿ

ಡಾಲಿ ಧನಂಜಯ್ ಇಂಡಸ್ಟ್ರಿಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರೋ ಕಲಾವಿದ.. ಯಾವುದೇ ರೀತಿಯ ಪಾತ್ರಗಳಾದ್ರು ಸೈ ..ತನ್ನದೇ ಸ್ಟೈಲ್ ನಲ್ಲಿ ಪ್ರಸೆಂಟ್ ಮಾಡೋ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ…ಯೆಸ್ ಹೆಡ್ ಬುಷ್ ಚಿತ್ರ ಬಿಡುಗಡೆ ಆಗಿ ಮೂರು ದಿನ ಕಳೆದಿದ್ದು, ದಿನದಿಂದ ದಿನಕ್ಕೆ ಚಿತ್ರದ ಮೇಲಿನ ಕ್ರೇಜ್ ಜೋರಾಗ್ತಿದೆ..ಎಲ್ಲಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ..ಡಾಲಿಯನ್ನ ಜಯರಾಜ್ ಸ್ಟೈಲ್ ನಲ್ಲಿ ನೋಡಿ ಪ್ರೇಕ್ಷಕರು ಫುಲ್ ಹ್ಯಾಪಿ ಆಗಿದ್ದಾರೆ…ಜಯರಾಜ್ ಲೈಫ್ ಸ್ಟೋರಿಯನ್ನ ಅಗ್ನಿಶ್ರೀಧರ್ ತೆರೆ ಮೇಲೆ ಅದ್ಬುತವಾಗಿ ಕಟ್ಟಿಕೊಟ್ಟಿದ್ದು ಪ್ರೇಕ್ಷಕರು ಈ ಥ್ರಿಲ್ಲಿಂಗ್ ಜರ್ನಿಯನ್ನ ಎಂಜಾಯ್ ಮಾಡುತ್ತಿದ್ದಾರೆ….

ಮೂರು ದಿನಗಳಲ್ಲಿ ಭರ್ಜರಿ ಕಲೆಕ್ಷನ್ಸ್ ಮಾಡಿದ ಹೆಡ್ ಬುಷ್
ಹೆಡ್ ಬುಷ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯೋದ್ರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಘಳಿಕೆ ಮಾಡ್ತಿದೆ…ಹೌದು ರಿಲೀಸ್ ಆದ ಮೂರು ದಿನದಲ್ಲಿ 9 ಕೋಟಿ ಗಳಿಕೆ ಮಾಡಿದೆ ಹೆಡ್ ಬುಷ್ ಸಿನಿಮಾ..ಇದು ಡಾಲಿ ವೃತ್ತಿ ಬದುಕಿನ ಅತಿ ಹೆಚ್ಚು ಘಳಿಕೆ ಚಿತ್ರವಾಗಿದೆ…ಸಿನಿಮಾದಲ್ಲಿ ಡಾಲಿ ಪಾತ್ರವಷ್ಟೇ ಅಲ್ಲದೇ ಯೋಗಿ, ಬಾಲು ನಾಗೇಂದ್ರ , ವಸಿಷ್ಠ ಸಿಂಹ ಹೀಗೆ ಇನ್ನೂ ಅನೇಕರ ಅಭಿನಯ ಚಿತ್ರಕ್ಕೆ ಪ್ಲಸ್ ಆಗಿದ್ದು ಆನ್ ಸ್ಕ್ರೀನ್ ನಲ್ಲಿ ಯೋಗಿ ಮತ್ತು ಡಾಲಿ ಫ್ರೆಂಡ್ ಶಿಫ್ ಜರ್ನಿ ಸ್ಟೋರಿ ಸಖತ್ತಾಗಿ ವರ್ಕ್ ಆಗಿದೆ…
ಡಾಲಿ ಬಾಳಲ್ಲಿ ದೀಪಾವಳಿ ಸಂಭ್ರಮ

ಗೆಲುವಿನ ಹಾದಿಯಲ್ಲಿ ಹೆಡ್ ಬುಷ್ ಸಿನಿಮಾ ಸಾಗುತ್ತಿದ್ದು ಈ ಭಾರಿಯ ದೀಪಾವಳಿ ಹಬ್ಬ ಧನಂಜಯ ಬಾಳಲ್ಲಿ ಡಬಲ್ ಸಂಭ್ರಮವನ್ನ ತಂದಿದೆ…ಹಬ್ಬಕ್ಕಾಗಿ ಸಾಲು ಸಾಲು ರಜೆಗಳಿರೋದ್ರಿಂದ ಪ್ರೇಕ್ಷಕರು ಸಿನಿಮಾ ನೋಡಲು ಥಿಯೇಟರ್ ನತ್ತ ಮುಖ ಮಾಡುತ್ತಿದ್ದಾರೆ…ವಿಶೇಷ ಅಂದ್ರೆ ಚಿತ್ರ ನೋಡಲು ಫ್ಯಾಮಿಲಿ ಸಮೇತರಾಗಿ ಚಿತ್ರಮಂದಿರಗಳಿಗೆ ಬರ್ತಿರೋದು ಸಿನಿಮಾತಂಡದ ಸಂತಸಕ್ಕೆ ಕಾರಣವಾಗಿದೆ…ಸದ್ಯ ೯ ಕೋಟಿ ಕಲೇಕ್ಷನ್ ಮಾಡಿರೋ ಹೆಡ್ ಬುಷ್ ಸಿನಿಮಾ ಹಬ್ಬ ಮುಗಿಯೋ ಅಷ್ಟರಲ್ಲಿ ೫೦ ಕ್ಲಬ್ ಸೇರೇದು ಪಕ್ಕಾ ಆಗಿದೆ…
ಪವಿತ್ರ ಬಿ