Breaking news: ಹಾಲಿವುಡ್ ಗೆ ಹಾರಿದ ರಾಕಿ ಬಾಯ್ !

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ತೆರೆಗೆ ಬರಲು ಸಿದ್ಧವಾಗಿದೆ….ಈಗಾಗಲೇ ಸಿನಿಮಾತಂಡ ಅನೌನ್ಸ್ ಮಾಡಿದಂತೆ ಏಪ್ರಿಲ್ 14 ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ ..
ಇನ್ನೂ ವಿಶೇಷವೆಂದರೆ ಈ ಬಾರಿ ರಾಕಿ ಭಾಯ್ ಸ್ಟೋರಿಯನ್ನ 6ಭಾಷೆಯಲ್ಲಿ ನೋಡಬಹುದಾಗಿದೆ… ಹೌದು ಕೆಜಿಎಫ್ ಚಾಪ್ಟರ್ 1ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು…ಆದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂಗ್ಲಿಷ್ ಸೇರಿದಂತೆ 6ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ

ಕೆಜಿಎಫ್ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ ಹಾಗೂ 6 ಭಾಷೆಯಲ್ಲಿ ತೆರೆಗೆ ಬರಲಿದೆ ಎಂಬ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ಹೊಂಬಾಳೆ ಸಂಸ್ಥೆ ಅಭಿಮಾನಿಗಳಿಗೆ ತಿಳಿಸಿದೆ…
ಈ ಮೂಲಕ ನ್ಯಾಷನಲ್ ಸ್ಟಾರ್ ಆಗಿರೋ ರಾಕಿಂಗ್ ಸ್ಟಾರ್ ಹಾಲಿವುಡ್ ಅಂಗಳಕ್ಕೂ ಕಾಲಿಡಲಿದ್ದಾರೆ…ಈಗಾಗಲೇ ತಮ್ಮ ಅಭಿನಯದ ಮೂಲಕ ಸ್ಯಾಂಡಲ್ ವುಡ್ ನತ್ತ ಭಾರತೀಯ ಸಿನಿಮಾರಂಗವೇ ತಿರುಗಿ ನೋಡುವಂತೆ ಮಾಡಿದ್ದ ಯಶ್ ಈಗ ಹಾಲಿವುಡ್ ಅಂಗಳದಲ್ಲಿಯೂ ಕನ್ನಡದ ಕೀರ್ತಿ ಪತಾಕೆ ಹಾರಿಸಲಿದ್ದಾರೆ…
