ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಜಕೀಯದ ರಾಜಾಹುಲಿ

ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ತಮ್ಮ ಜೀವನ ಸವೆಸಿದ ಬಿಎಸ್ ಯಡಿಯೂರಪ್ಪ ಅವರು ಸತ್ಯ ನಿವೃತ್ತಿ ಪಡೆದು ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ ಎಷ್ಟೇ ರಾಜಕೀಯ ಜಂಜಾಟವಿಲ್ಲದೆ ಮನೆಯಲ್ಲಿ ಬಿಡುವಾಗಿರುವ ಯಡಿಯೂರಪ್ಪ ಅವರು ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತನುಜಾ ಎಂಬ ಚಿತ್ರಕ್ಕೆ ಮೊಟ್ಟಮೊದಲ ಬಾರಿಗೆ ಬಣ್ಣ ಹಚ್ಚಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ.
ಈ ಹಿಂದೆ ಅವರೇ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತನುಜಾ ಎಂಬ ಹೆಣ್ಣುಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು.
ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಬಂದು ಪರೀಕ್ಷೆ ಬರೆದಿದ್ದೆ ರೋಚಕತೆಯಿಂದ ಕೂಡಿದ್ದು ಎಲ್ಲರ ಕುತೂಹಲ ಕೆರಳಿಸಿತು ಇದನ್ನೇ ಒನ್ಲೈನ್ ಸ್ಟೋರಿ ಆಗಿಸಿಕೊಂಡು ಸಾಮಾಜಿಕ ಕಳಕಳಿಯುಳ್ಳ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಇದೀಗ ಮಾಜಿ ಸಿಎಂ ಆಗಮನದಿಂದ ಚಿತ್ರತಂಡಕ್ಕೆ ದೊಡ್ಡ ಗೆಲುವಾಗಿದ್ದು ಖುದ್ದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಇಂದು ಅವರ ಪಾತ್ರಕ್ಕೆ ಬಣ್ಣಹಚ್ಚಿದ್ದು ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸುತ್ತಿದೆ. ಇಂದು ಮೊದಲ ದಿನ ಅವರ ಭಾಗದ ಚಿತ್ರೀಕರಣ ಯಶಸ್ವಿಯಾಗಿ ನಡೆದಿದ್ದು ಅತ್ಯದ್ಭುತವಾಗಿ ನಟಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಯಡಿಯೂರಪ್ಪನವರನ್ನು ವಿಧಾನಸೌಧದ ಒಳಗೆ ಮತ್ತು ಹೊರಗೆ ಹೋರಾಟದ ಮುಖವನ್ನ ಕಂಡಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರು ಚಿತ್ರದಲ್ಲಿ ಹೇಗೆ ಕಾಣಿಸುತ್ತಾರೋ..? ಅವರ ಪಾತ್ರ ಹೇಗಿರಲಿದೆ.? ಎನ್ನುವ ಸಹಜ ಕುತೂಹಲ ಎಲ್ಲರಲ್ಲಿದೆ. ಇದಕ್ಕೆಲ್ಲ ಉತ್ತರವಾಗಿ ಸದ್ಯದಲ್ಲೇ ಚಿತ್ರ ತೆರೆಕಾಣುತ್ತಿದೆ.


