ಕಮ್ ಬ್ಯಾಕ್ ಬಗ್ಗೆ ಗುಡ್ ನ್ಯೂಸ್ ಕೊಟ್ಟೇಬಿಟ್ಟ ನಟಿ ರಮ್ಯಾ
ಸ್ಯಾಂಡಲ್ ವುಡ್ ನ ಕ್ವೀನ್ ನಟಿ ರಮ್ಯಾ ಕಂಬ್ಯಾಕ್ ಮಾಡ್ತಾರೆ ಅನ್ನೋ ವಿಚಾರ ಈಗಾಗಲೇ ಸಾಕಷ್ಟು ವರ್ಷಗಳಿಂದ ಹರಿದಾಡುತ್ತಿದೆ…ಸುಮಾರು ದಶಕಗಳ ಕಾಲ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚಿದ ರಮ್ಯಾ ನಂತರ ರಾಜಕೀಯ ರಂಗ ಪ್ರವೇಶ ಮಾಡಿದ್ರು… ರಾಜಕೀಯ ಹಾಗೂ ಸಿನಿಮಾ ಎರಡರಿಂದಲೂ ಕೆಲವು ದಿನಗಳಿಂದ ದೂರ ಉಳಿದುಬಿಟ್ಟಿದ್ದಾರೆ ..ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಮ್ಯಾ ಆಗಾಗ ಸಿನಿಮಾ ರಾಜಕೀಯ ಹಾಗೂ ಕಿರುತೆರೆಯ ಸ್ಟಾರ್ ಗಳಿಗೆ ಸಪೋರ್ಟ್ ಮಾಡುವ ನಿಟ್ಟಿನಲ್ಲಿ ಮತ್ತೆ ಸಿನಿಮಾರಂಗದತ್ತ ಆಸಕ್ತಿ ತೋರುತ್ತಿದ್ದಾರೆ ..


ಇತ್ತೀಚೆಗೆ ರಾಜಕಾರಣಿ ಮಗನ ಕಾರಿಗೆ ಸಿಲುಕಿ ಮೃತಪಟ್ಟ ಶ್ವಾನದ ಅಂತಿಮ ದರ್ಶನಕ್ಕೆ ಆಗಮಿಸಿದ ನಟಿ ರಮ್ಯಾ ಮಾರ್ಚ್ ಸಮಯದಲ್ಲಿ ಗುಡ್ ನ್ಯೂಸ್ ಕೊಡುವುದಾಗಿ ತಿಳಿಸಿದ್ದರು ..ಅದರಂತೆ ಅವರ ಅಭಿಮಾನಿಗಳು ಕೂಡ ಮಾರ್ಚ್ ನಲ್ಲಿ ರಮ್ಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು ..

ಅದಕ್ಕೆ ಉತ್ತರ ಎನ್ನುವಂತೆ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಕಂಬ್ಯಾಕ್ ಬಗ್ಗೆ ಮಾತನಾಡಿದ್ದಾರೆ… ಹೌದು ಸಿನಿಮಾ ಕಮ್ ಬ್ಯಾಕ್ ಮಾಡುವ ಬಗ್ಗೆ ನಟಿ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ ..ನನ್ನ ಕಂಬ್ಯಾಕ್ ಬಗ್ಗೆ ಕೆಲ ಸುದ್ದಿಗಳು ಹರಿದಾಡುತ್ತಿದೆ… ನಿಮ್ಮ ಕುತೂಹಲ ನನಗೆ ಅರ್ಥ ಆಗುತ್ತೆ… ಸ್ವಲ್ಪ ಸಮಯದಿಂದ ನಾನು ಕೆಲ ಸ್ಕ್ರಿಪ್ಟ್ ಗಳನ್ನ ಕೇಳಿದ್ದೇನೆ… ಅದೆಲ್ಲಾ ಓಕೆ ಆಯ್ತು ಅಂದ್ರೆ ಸಿನಿಮಾ ಮಾಡುವೆ.. ಈ ಬಗ್ಗೆ ನಾನು ಮಾಹಿತಿ ಕೊಡುವವರೆಗೂ ನೀವು ನಿಮ್ಮ ಕುತೂಹಲವನ್ನು ಹಾಗೆ ಇಟ್ಟುಕೊಳ್ಳಿ ..ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ..

ಇತ್ತೀಚೆಗೆ ರಾಜಕೀಯದ ಬಗ್ಗೆ ಆಸಕ್ತಿ ಕಡಿಮೆ ಮಾಡಿಕೊಂಡಿರುವ ರಮ್ಯಾ ಸಿನಿಮಾರಂಗದ ಕಲಾವಿದರ ಜತೆ ಉತ್ತಮ ಬಾಂದವ್ಯ ಇಟ್ಟುಕೊಂಡಿದ್ದು ಹಾಗೂ ಅವರ ಸಿನಿಮಾಗಳನ್ನ ಪ್ರಮೋಟ್ ಮಾಡಲು ಸಹಾಯ ಮಾಡುತ್ತಿದ್ದಾರೆ.. ಅದಷ್ಟೇ ಅಲ್ಲದೆ ಪುನೀತ್ ನಿಧನದ ಸಮಯದಲ್ಲಿ ಮಾತನಾಡಿ ದ್ವಿತ್ವ ಸಿನಿಮಾದಲ್ಲಿ ಅಪ್ಪು ಜೊತೆ ನಟಿಸಲು ಆಫರ್ ಬಂದಿದ್ದು ನಿಜ.. ಆದರೆ ಆ ಸಮಯದಲ್ಲಿ ನನಗೆ ನಟಿಸಲು ಆಸಕ್ತಿ ಇರಲಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು…. ಸದ್ಯ ಈಗ ರಮ್ಯಾ ಹಾಕಿರುವ ಪೋಸ್ಟ್ ನೋಡಿದ್ರೆ ಆದಷ್ಟು ಬೇಗ ಚಿತ್ರರಂಗಕ್ಕೆ ಮರಳುವ ಮನಸ್ಸು ಮಾಡಿದ್ದಾರೆ ಎನ್ನಿಸುತ್ತಿದೆ…
