ರಶ್ಮಿಕಾ ಸೀರೆಗೆ ಬಂತು ಭರ್ಜರಿ ಡಿಮ್ಯಾಂಡ್
ಟಾಲಿವುಡ್ ಅಂಗಳದಲ್ಲಿ ಪುಷ್ಪಾ ಸಿನಿಮಾ ಬಿಡುಗಡೆಯಾದ ನಂತರ ನಟಿ ರಶ್ಮಿಕಾ ಮಂದಣ್ಣಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ ..ಸಿನಿಮಾ ಬಿಡುಗಡೆ ಆಗಿ ಈಗಾಗ್ಲೇ ಹಿಟ್ ಲೀಸ್ಟ್ ಸೇರಿದೆ..ಸಿನಿಮಾದ ಸ್ಟಾರ್ ಗಳಿಗೆ ಮಾರ್ಕೆಟ್ ನಲ್ಲಿ ಭಾರಿ ಬೇಡಿಕೆ ಹುಟ್ಟುಕೊಂಡಿದೆ…

ಸಿನಿಮಾ ಸೂಪರ್ ಹಿಟ್ ಆದ ನಂತರವೂ ಚಿತ್ರದ ಕ್ರೇಜ್ ಮಾತ್ರ ಇನ್ನೂ ಮುಗಿದಿಲ್ಲ…ಪುಷ್ಪ ಚಿತ್ರದ ಹಾಡು, ಡೈಲಾಗು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟುಹಾಕುತ್ತೆ …ಶ್ರೀವಲ್ಲಿ ಹಾಗೂ ಸಾಮಿ ಹಾಡು ಇನ್ನು ಟ್ರೆಂಡಿಂಗ್ ನಲ್ಲಿಯೇ ಇದೆ…ಅಲ್ಲು ಅರ್ಜುನ್ ಸಿಗ್ನೆಚರ್ ಸ್ಟೆಪ್ ಮಕ್ಕಳ ಮನಸ್ಸನ್ನು ಸೆಳೆಯುತ್ತಿದೆ…ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಪುಷ್ಪಾ ಸೀರೆ ಭಾರಿ ಟ್ರೆಂಡ್ ಹುಟ್ಟುಹಾಕಿದೆ…

ಹೌದು ಮಾರುಕಟ್ಟೆಯಲ್ಲಿ ಪುಷ್ಪ ಸ್ಟಾರ್ ಗಳಾದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಫೋಟೋ ಇರುವಂಥ ಸೀರೆಗಳು ಮಾರಾಟವಾಗುತ್ತಿದೆ.. ಬ್ಲಾಕ್ ಬಸ್ಟರ್ ಸಿನಿಮಾ ಸಾಲಿನಲ್ಲಿ ಸೇರಿರುವ ತೆಲುಗಿನ ಪುಷ್ಪ ಸಿನಿರಸಿಕರ ಮನ ಗೆಲ್ಲುವುದರ ಜತೆಗೆ ಸೀರೆಯ ಮೂಲಕ ಹೆಂಗಳೆಯರ ಮನಸ್ಸು ಗೆಲ್ಲುತ್ತಿದೆ ..
