ಸೂಸೈಡ್ ಮಾಡಿಕೊಳ್ಳಲು ಹೊರಟ ನಟ ರಿಷಿ..!
ಆಪರೇಷನ್ ಅಲಮೇಲಮ್ಮ, ಸಾರ್ವಜನಿಕರಿಗೆ ಸುವರ್ಣಾವಕಾಶ, ಕವಲುದಾರಿಯಂಥಾ ವಿಭಿನ್ನ ಹಾಗೂ ಹಿಟ್ ಸಿನಿಮಾಗಳನ್ ನೀಡಿರೋ ನಟ ರಿಷಿ ಸೂಸೈಡ್ ಮಾಡಿಕೊಳ್ಳೊ ಪ್ರಯತ್ನ ಮಾಡಿದ್ದಾರೆ, ಆದ್ರೆ ರಿಯಲ್ ಲೈಫ್‌ನಲ್ಲಿ ಅಲ್ಲ, ಸಿನಿಮಾದಲ್ಲಿ. ಹೌದು ರಿಷಿ ಅಭಿನಯದ ಮುಂದಿನ ಸಿನಿಮಾ ʻನೋಡಿ ಸ್ವಾಮಿ ಇವನು ಇರೋದೇ ಹೀಗೆʼ ಟೀಸರ್ ರಿಲೀಸ್ ಆಗಿದೆ, ಈ ಟೀಸರ್ ನಲ್ಲಿ ರಿಷಿ ಸುಸೈಡ್ ಮಾಡಿಕೊಳ್ಳೋ ಟೆಂಡೆಂನ್ಸಿ ಇರೋ ಮನೋರೋಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಆದ್ರೆ ರಿಷಿ ಈ ಸಿನಿಮಾದಲ್ಲಿ ಯಾಕೆ ಸಾಯ್ಬೇಕು ಅಂದುಕೊಳ್ತಾರೆ, ಸಾಯೋಕು ಎಷ್ಟೆಲ್ಲಾ ಕಷ್ಟ ಪಡ್ತಾರೆ ಅನ್ನೋ ಕಥೆಯನ್ನ ಹೆಣೆದಿರೋ ಹಾಗಿದೆ.
ಆದ್ರೆ ರಿಷಿ ಅವ್ರೇ ಹೇಳೊ ಪ್ರಕಾರ ಇದು ಟೀಸರ್ ಅಷ್ಟೆ, ಇದೇ ಸಿನಿಮಾದ ಕಥೆಯಾಗಿರಬಹುದು ಅಂತಲೂ ಅಲ್ಲ, ಟೀಸರ್ ನೋಡಿದಾಗ್ಲೆ ಸಿನಿಮಾ ಒಂದು ಕಾಮಿಡಿ ಥ್ರಿಲ್ಲರ್ ಅನ್ನಿಸುತ್ತೆ, ರಿಷಿ ಜೊತೆಗೆ ಧನ್ಯಾ ಬಾಲಕೃಷ್ಣ, ಗ್ರೀಶ್ಮ ಶ್ರೀಧರ್, ನಾಗಭೂಷಣ್, ಅಪೂರ್ವ ಭಾರದ್ವಜ್ ನಟಿಸಿದ್ದಾರೆ. ಸಿನಿಮಾಕ್ಕೆ ಅಮರೇಜ್ ಸೂರ್ಯವಂಶಿ ಹಣ ಹಾಕಿದ್ದು, ಇಸ್ಲಾಹುದ್ದಿನ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಸನ್ನ ಶಿವರಾಂ ಮ್ಯೂಸಿಕ್ ಹಾಗು ದುಲಿಪ್ ಕುಮಾ ಕ್ಯಾಮರಾ ವರ್ಕ್ ಸಿನಿಮಾಕ್ಕಿದೆ. ಇದು ಬರೀ ಟೀಸರ್ ಅಷ್ಟೆ ಅಂತ ಹೇಳಿರೋದ್ರಿಂದ ಸಿನಿಮಾದಲ್ಲಿ ಇನ್ನೂ ಏನನ್ನ ಬೇಕಾದ್ರು ನಿರೀಕ್ಷೆ ಮಾಡಬಹುದು.