ವ್ಯಾಲೆಂಟೈನ್ಸ್ ಡೇ ಆಗಿ 10 ದಿನಕ್ಕೆ `ಏಕ್ ಲವ್ ಯಾ’ ರಿಲೀಸ್
ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಕೊರೊನಾ ಲಾಕ್‌ಡೌನ್, ಥಿಯೇಟರ್ ನಲ್ಲಿ ಸೀಟು ಭರ್ತಿಗೆ ಅವಕಾಶ ಇದೆಲ್ಲಾ ಏನೂ ಸಮಸ್ಯೆ ಇಲ್ಲದೇ ಹೊಗಿದ್ರೆ ಜ.21ಕ್ಕೆ ರಿಲೀಸ್ ಅಗಬೇಕಿತ್ತು, ಮಿಸ್ ಆಗಿದ್ರೆ ಅದಕ್ಕೂ ಮೊದಲೇ ಡಿಸೈಡ್ ಆಗಿದ್ದ ವ್ಯಾಲೆಂಟೈನ್ಸ್ ಡೇಗೆ ಆದ್ರೂ ರಿಲೀಸ್ ಆಗಬೇಕಿತ್ತು, ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ಸ್ ನಿರ್ದೇಶನದಲ್ಲಿ, ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿರೋ ʻಏಕ್ ಲವ್ ಯಾʼ. ಆದ್ರೀಗ ಫೈನಲ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಫೆ.14ಕ್ಕೆ ಅಂದ್ರೆ ವ್ಯಾಲೆಂಟೈನ್ಸ್ ಡೇ ಆಗಿ 10ದಿನಕ್ಕೆ ʻಏಕ್ ಲವ್ ಯಾʼ ತೆರೆಗೆ ಬರ್ತಾ ಇದೆ.
ರಕ್ಷಿತಾ ಪ್ರೇಮ್ ಸಹೋದರ ರಾಣ ಡೆಬ್ಯು ಸಿನಿಮಾ ಆಗಿರೋ ʻಏಕ್ ಲವ್ ಯಾʼದ ಹಾಡುಗಳು ಈಗಾಗ್ಲೆ ಸೂಪರ್ ಹಿಟ್ ಆಗಿದ್ದು, ಜನರೂ ಕೂಡ ಸಿನಿಮಾಕ್ಕೆ ಕಾಯ್ತಾ ಇದ್ದಾರೆ. ಹಾಡುಗಳಿಂದ್ಲೆ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾದ ಟ್ರೇಲರ್ ಇದೇ ತಿಂಗಳು 10ಕ್ಕೆ ರಿಲೀಸ್ ಆಗ್ತಾ ಇದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಡೈರೆಕ್ಷನ್ ಹಾಡುಗಳು ಅದಾಗ್ಲೆ ಮಾರ್ಕೆಟ್‌ನಲ್ಲಿ ಸೌಂಡ್ ಮಾಡಿವೆ. ಇನ್ನು ಟ್ರೇಲರ್‌ನಲ್ಲಿ ಪ್ರೇಮ್ ಸ್ಟೈಲ್‌ನ ಡೈಲಾಗ್‌ಗಳು, ಜನರನ್ನ ಥಿಯೇಟರ್‌ಗೆ ಸೆಳೆಯೋದ್ರಲ್ಲಿ ಡೌಟೇ ಇಲ್ಲ.
ರಾಣಾಗೆ ನಾಯಕಿಯರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಹೊಸ ಹುಡುಗಿ ರೀಶ್ಮಾ ನಾಣಯ್ಯ ನಟಿಸಿದ್ದಾರೆ. ರಚಿತಾ ಬೋಲ್ಡ್ ಲುಕ್ ಈಗಾಗ್ಲೆ ಎಲ್ಲರನ್ನೂ ಬೋಲ್ಡ್ ಮಾಡಿದೆ. ಸಿನಿಮಾದಲ್ಲಿ ಇನ್ನು ದೊಡ್ಡ ಸ್ಟಾರ್ ಕಾಸ್ಟ್ ಇದ್ದು, ಮೇಕಿಂಗ್ ಕೂಡ ಅದ್ಭುತವಾಗಿದೆ ಅನ್ನೋದಕ್ಕೆ ರಿಲೀಸ್ ಆಗಿರೋ ಲಿರಿಕಲ್ ಹಾಡುಗಳು ಹಾಗೂ ಟೀಸರ್ರೇ ಸಾಕ್ಷಿ.