EXCLUSIVE..! ರಾಕಿಂಗ್ ಸ್ಟಾರ್ ಯಶ್ ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಗೊತ್ತಾ? ಇಲ್ಲಿದೆ ಎಕ್ಸ್ ಕ್ಲೂಸಿವ್ ಇನ್ಫಾರ್ಮೇಷನ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ತೆರೆಗೆ ಬರಲು ಸಿದ್ಧವಾಗಿದೆ.. ಅದನ್ನು ಹೊರತುಪಡಿಸಿದಂತೆ ಯಶ್ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ…ಈಗಾಗಲೇ ನಾಲ್ಕು ವರ್ಷಗಳಿಂದ ರಾಖಿ ಬಾಯ್ ರನ್ನ ತೆರೆಮೇಲೆ ಕಾಣದೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.. ಕೋವಿಡ್ ಕಾರಣದಿಂದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇರೋ.. ಯಶ್ ಸದ್ಯ ಏನ್ ಮಾಡುತ್ತಿದ್ದಾರೆ…. ಎಲ್ಲಿದ್ದಾರೆ ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತೆ ..


ಅದರಂತೆ ರಾಕಿಂಗ್ ಸ್ಟಾರ್ ಸದ್ಯ ಕುಂದಾಪುರದಲ್ಲಿ ಬೀಡುಬಿಟ್ಟಿದ್ದಾರೆ… ಅರೆ ಬೆಂಗಳೂರು ಬಿಟ್ಟು ಕುಂದಾಪುರದಲ್ಲಿ ಏನ್ಮಾಡ್ತಿದ್ದಾರೆ ಅಂತ ಯೋಚನೆ ಮಾಡ್ಬೇಡಿ….ಇತ್ತೀಚೆಗಷ್ಟೇ ತನ್ನ ಬಾಡಿಗಾರ್ಡ್ ಬರ್ತಡೇಯನ್ನ ಆಚರಣೆ ಮಾಡಿರುವ ನಟ ಯಶ್ ಕುಂದಾಪುರದಲ್ಲಿರುವ ರವಿ ಬಸ್ರೂರು ಅವರ ಸ್ಟುಡಿಯೊದಲ್ಲಿ ಕೆಜಿಎಫ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ …


ಈಗಾಗಲೇ ಚಿತ್ರತಂಡ ಅನೌನ್ಸ್ ಮಾಡಿರುವಂತೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ… ಸದ್ಯ ಈಗಾಗಲೇ ಕರೋನಾ ಭೀತಿಯಿಂದ ಎಲ್ಲರೂ ಹೊರಬಂದಿದ್ದು… ಇನ್ನ ಕೆಲವೇ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ಥಿಯೇಟರ್ ನಲ್ಲಿ ನೂರರಷ್ಟು ಅವಕಾಶ ಸಿಗಲಿದೆ… ಹಾಗಾಗಿ ಸಿನಿಮಾದ ಪ್ರಚಾರ ಹಾಗೂ ಬಿಡುಗಡೆಯ ಸಿದ್ಧತೆಯಲ್ಲಿ ಸಿನಿಮಾತಂಡ ಬಿಸಿಯಾಗಿದೆ….ಇದರ ಮೀಟಿಂಗ್ ಗಳು ಹಾಗೂ ಡಿಸ್ಕಷನ್ ಗಳು ಕುಂದಾಪುರದಲ್ಲಿರುವ ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿ ನಡೆಯುತ್ತಿದೆ ..