ʼಉಸಿರೇ.. ಉಸಿರೇ..ʼ ಚಿತ್ರತಂಡಕ್ಕೆ ವಿಶ್ ಮಾಡಿದ ಅಲ್ಲು ಅರ್ಜುನ್.
ಕ್ಯಾಸಿನೊ ಪ್ರೈಡ್ ಮೂಲಕ ಗೋವಾದಲ್ಲಿ ಒಂದು ಸುಂದರ ಸಮಾರಂಭ ಆಯೋಜಿಸಲಾಗಿತ್ತು. ಅಲ್ಲಿ “ಉಸಿರೇ ಉಸಿರೇ” ಚಿತ್ರದ ಕುರಿತು ಒಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ, ಬಿಗ್ ಬಾಸ್ ಖ್ಯಾತಿಯ ರಾಜೀವ್, ಖ್ಯಾತ ಬಹುಭಾಷಾ ನಟ ಅಲಿ ಜೊತೆ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ “ಪುಷ್ಪ” ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ರು ರಾಜೀವ್. ಆ ತಕ್ಷಣ ಅಲಿ ಅವರು ಅಲ್ಲು ಅರ್ಜುನ್ ಅವರಿಗೆ ವಿಡಿಯೋ ಕಾಲ್ ಮಾಡಿ ರಾಜೀವ್ ಮತ್ತು ಟೀಮ್ನ ಡ್ಯಾನ್ಸ್ ತೋರಿಸಿದ್ದಾರೆ. ಇದರಿಂದ ಖುಷಿಗೊಂಡ ಅಲ್ಲು ಅರ್ಜುನ್ ಅವರು ಅಲ್ಲಿ ನೆರೆದಿದ್ದವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿ ಹಾಗೂ ಶುಭ ಹಾರೈಸಿದ್ದಾರೆ.


ಉಸಿರೇ ಉಸಿರೇ ಸಿನಿಮಾವನ್ನ ಗೊಂಬೆ ಪ್ರೊಡಕ್ಷನ್ಸ್ ಮೂಲಕ ಪ್ರದೀಪ್ ಯಾದವ್ ನಿರ್ಮಾಣ ಮಾಡ್ತಾ ಇದ್ದಾರೆ .ಚಿತ್ರದಲ್ಲಿ ರಾಜೀವ್ ನಾಯಕನಾಗಿ ನಟಿಸುತ್ತಿದ್ದು,ರಾಜೀವ್ಗೆ ನಾಯಕಿಯಾಗಿ ಶ್ರೀಜಿತಾ ನಟಿಸುತ್ತಿದ್ದಾರೆ. ಈ ರೊಮ್ಯಾಂಟಿಕ್ ಸಿನಿಮಾವನ್ನು ಸಿ.ಎಂ.ವಿಜಯ್ ನಿರ್ದೇಶನ ಮಾಡ್ತಾ ಇದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.”ಉಸಿರೇ ಉಸಿರೇ ಚಿತ್ರದ ಮತ್ತೊಂದು ಸ್ಪೆಷಾಲಿಟಿ ಅಂದ್ರೆ ಖ್ಯಾತ ನಟ ಪದ್ಮಶ್ರೀ ಬ್ರಹ್ಮಾನಂದಂ ಕೂಡ ನಟಿಸುತ್ತಿದ್ದಾರೆ.