News

ಶಿವರಾಜ್ ಕೆ.ಆರ್ ಪೇಟೆ ಟೈಮ್ ಕೆಟ್ಟಿದೆ..ಈ ಜೀವನ ತುಕಾಲಿ ಅಂತಿದ್ದಾರೆ

ಶಿವರಾಜ್ ಕೆ.ಆರ್ ಪೇಟೆ ಟೈಮ್ ಕೆಟ್ಟಿದೆ..ಈ ಜೀವನ ತುಕಾಲಿ ಅಂತಿದ್ದಾರೆ
  • PublishedDecember 30, 2021

ಶಿವರಾಜ್ ಕೆ.ಆರ್.ಪೇಟೆ ಇರುವ ಕಡೆ ಹಾಸ್ಯ ಹಾಸುಹೊಕ್ಕಾಗಿರುತ್ತದೆ. ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಕನ್ನಡಿಗರ ಮನಗೆದಿದ್ದ ಶಿವು ಧಮಾಕಾ ಚಿತ್ರದ ಮೂಲಕ ಕಮಾಲ್ ಮಾಡಲು ಬರುತ್ತಿದ್ದಾರೆ. ಇತ್ತೀಚೆಗೆ ಧಮಾಕಾ ಚಿತ್ರದ ಟೀಸರ್ ರಿಲೀಸ್ ಆಗಿತ್ತು ಅದರಲ್ಲಿ ಯೋಗರಾಜ್ ಭಟ್ರ ಬ್ಯಾಕ್ ಗ್ರೌಂಡ್ ವಾಯ್ಸ್ ಗೆ ಕಾಮಿಡಿ ಸ್ಟಾರ್ ಶಿವು ಆಕ್ಷನ್ ನೋಡಿದ ಸಿನಿ ಪ್ರೇಮಿಗಳು ಟೀಸರ್ ಅನ್ನು ಮೆಚ್ಚಿಕೊಂಡಿದ್ದರು.

ಈಗ ಧಮಾಕಾ ಸಿನಿಮಾದ ಬೊಂಬಾಟ್ ಟ್ರ್ಯಾಕ್ ನಂಬರ್ ರಿಲೀಸ್ ಆಗಿದೆ. ತುಕಾಲಿ ಜೀವನ ಅನ್ನೋ ಕಚಗುಳಿ ಇಡುವ ಹಾಡು ಆನಂದ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ ಲಕ್ಷ್ಮೀ ರಮೇಶ್ ಬರೆದಿರುವ ಹಾಡಿಗೆ ಕಂಚಿನ ಕಂಠದ ಗಾಯಕ‌ ನವೀನ್ ಸಜ್ಜು ಕಂಠ ಕುಣಿಸಿದ್ದು, ವಿಕಾಸ್ ವಸಿಷ್ಠ ಮ್ಯೂಸಿಕ್ ನೀಡಿದ್ದಾರೆ.

ಈ ಹಿಂದೆ ರಿಲೀಸ್ ಆಗಿದ್ದ ಧಮಾಕಾ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಈಗ ರಿಲೀಸ್ ಆಗಿರುವ ತುಕಾಲಿ ಹಾಡು‌ ಕೂಡ ಸಂಚಲನ ಸೃಷ್ಟಿಸಿದೆ‌.ಈ ಹಿಂದೆ ಸಿಂಪಲ್ ಸುನಿ ಬಳಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮೀ ರಮೇಶ್ ಧಮಾಕಾಗೆ ಆಕ್ಷನ್ ಕಟ್ ಹೇಳುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ಅವರಿಗೆ ಜೋಡಿಯಾಗಿ ನಯನಾ ಶರತ್ ಅಭಿನಯಿಸಿದ್ದಾರೆ, ಇಲ್ಲಿ ಇಬ್ಬರು ಕಾಮಿಡಿ ಕಿಲಾಡಿಗಳೇ ಸೇರಿರುವುದರಿಂದ ಬರಪೂರ ಮನರಂಜನೆಗೆ ಗ್ಯಾರೆಂಟಿ ಅನ್ನುತ್ತಿದೆ ಚಿತ್ರತಂಡ. ಇನ್ನು ತಾರಾ ಬಳಗದಲ್ಲಿ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. 

ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಸುನೀಲ್ ಎಸ್‌. ರಾಜ್ ಮತ್ತು ಅನ್ನಪೂರ್ಣ ಬಿ. ಪಾಟೀಲ್ ಬಂಡವಾಳ ಹಾಕಿದ್ದಾರೆ. ಹಾಲೇಶ್ ಕ್ಯಾಮೆರಾ, ವಿಕಾಸ್ ವಸಿಷ್ಠ ಮ್ಯೂಸಿಕ್, ವಿನಯ್ ಕೂರ್ಗ್ ಸಂಕಲನ ಧಮಾಕಾ ಸಿನಿಮಾದಲ್ಲಿರಲಿದೆ.

****

Written By
Kannadapichhar

Leave a Reply

Your email address will not be published. Required fields are marked *