ಫಸ್ಟ್ ರಾಂಕ್ ರಾಜು ಈಗ ರಾಜು ಜೇಮ್ಸ್ ಬಾಂಡ್
ಫಸ್ಟ್ ರ್ಯಾಂಕ್ ರಾಜು, ಕನ್ನಡ ಮೀಡಿಯಂ ರಾಜು ಚಿತ್ರಗಳ ಮೂಲಕ ರಾಜು ಎಂದೆ ಮನೆಮಾತಾಗಿದ್ದ ಸ್ಯಾಂಡಲ್ ವುಡ್ ನ ಗುರುನಂದನ್ ನಟನೆಯ ಮತ್ತೊಂದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಆ ಚಿತ್ರ ಯಾವುದು ಅಂತೀರಾ ಮತ್ತದೇ ರಾಜು ಹೆಸರಿನಿಂದ ಶುರುವಾಗುವ ‘ರಾಜು ಜೇಮ್ಸ್ ಬಾಂಡ್. ನಾಳೆ (ಡಿ.30) ಗುರುನಂದನ್ ಹುಟ್ಟುಹಬ್ಬ ಇದ್ದು ಚಿತ್ರ ತಂಡ ಚಿತ್ರದ ಟೀಸರ್ ಅನ್ನು ಉಡುಗೊರೆಯಾಗಿ ನೀಡಲಿದೆ.
ಸ್ಯಾಂಡಲ್ ವುಡ್ ರಾಜು ಎಂದೇ ಪ್ರಖ್ಯಾತರಾಗಿರುವ ಗುರುನಂದನ್ ಅವರು ಈಗ ರಾಜು ಜೇಮ್ಸ್ ಬಾಂಡ್ ಆಗಿ ಸಿನಿ ಪ್ರೇಮಿಗಳ ಮುಂದೆ ಬಂದು ನಿಲ್ಲಲಿದ್ದಾರೆ. ದೀಪಕ್ ಮಧುವನಹಳ್ಳಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ನಾಯಕ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂಬ ಛಲ ಹೊಂದಿದ್ದರೂ ಆವನು ಹೇಗೆ ಜೇಮ್ಸ್ ಬಾಂಡ್ ಆಗುತ್ತಾನೆ, ಅವನು ಬಾಂಡ್ ಆಗುವ ವೇಳೆ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ ಎಂಬುದೇ ಚಿತ್ರದ ಹೈಲೈಟ್.
ಚಿತ್ರದ ನಾಯಕಿಯಾಗಿ ಮೃದುಲಾ ಕಾಣಿಸಿಕೊಂಡಿದ್ದಾರೆ. ಉಳಿದ ತಾರಾಗಣದಲ್ಲಿ ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ತಬಲನಾಣಿ, ಜೈಜಗದೀಶ್, ವಿಜಯ್ ಚೆಂಡೂರ್, ಮಂಜುನಾಥ ಹೆಗ್ಡೆ ನಟಿಸಿದ್ದಾರೆ.

****