News

83 ಚಿತ್ರದೊಂದಿಗೆ ವಿಕ್ರಾಂತ್ ರೋಣ ಗ್ಲಿಂಪ್ಸ್!ಕಿಚ್ಚನ ಅಭಿಮಾನಿಗಳಿಗೆ ಧಮಾಕಾ

83 ಚಿತ್ರದೊಂದಿಗೆ ವಿಕ್ರಾಂತ್ ರೋಣ ಗ್ಲಿಂಪ್ಸ್!ಕಿಚ್ಚನ ಅಭಿಮಾನಿಗಳಿಗೆ ಧಮಾಕಾ
  • PublishedDecember 23, 2021

ರಣ್‌ ವೀರ್ ಸಿಂಗ್ ನಟನಯೆ ’83’ ಭಾರತೀಯ ಚಿತ್ರರಂಗಕ್ಕೆ ಒಂದು ವಿಭಿನ್ನ ಅನುಭವ ನೀಡಬಹುದಾದ ಸಿನಿಮಾ. ಅದೇ ಮತ್ತೊಂದು ಕಡೆ ಕಿಚ್ಚನ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಕೂಡ ವಿಶಿಷ್ಟ ಸಿನಿಮಾ. ಯಾಕಂದ್ರೆ, ಸುದೀಪ್ ಈ ಹಿಂದೆ ಇಂತಹದೊಂದು ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ. ಬಹುತೇಕ ಕಾಡಿನಲ್ಲೇ ಸಾಗುವ ಸಾಹಸಮಯ ಸಿನಿಮಾದಲ್ಲಿ ಕಿಚ್ಚ ಕಂಡಿದ್ದೇ ಇಲ್ಲ. ಇದೇ ಕಾರಣಕ್ಕೆ ಸುದೀಪ್ ಫ್ಯಾನ್ಸ್ ಸಿನಿಮಾ ನೋಡುವುದಕ್ಕೆ ಕಾದು ಕೂತಿದ್ದಾರೆ. ಈ ಮಧ್ಯೆ ’83’ ಎಲ್ಲೆಲ್ಲಿ 3ಡಿಯಲ್ಲಿ ಬಿಡುಗಡೆಯಾಗುತ್ತದೋ ಅಲೆಲ್ಲಾ ವಿಕ್ರಾಂತ್ ರೋಣ ಸಿನಿಮಾ ತುಣುಕುಗಳು 3ಡಿಯಲ್ಲಿಯೇ ಪ್ರದರ್ಶನ ಆಗಲಿದೆ.

ರಣ್‌ ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ’83’ ಭಾರತದಾದ್ಯಂತ ಸುಮಾರು 3 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಷ್ಟೂ ಚಿತ್ರಮಂದಿರಗಳಲ್ಲಿ ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ತುಣುಕುಗಳು ಬಿಡುಗಡೆಯಾಗಲಿದೆ. 3ಡಿ ಹಾಗೂ 2ಡಿಯಲ್ಲಿ ಎರಡರಲ್ಲೂ ತುಣುಕುಗಳು ಬಿಡುಗಡೆಯಾಗಲಿವೆ. ಇದಕ್ಕಾಗಿ ಭರ್ಜರಿ ತಯಾರಿ ನಡೆದಿದ್ದು, ಡಿಸೆಂಬರ್ 24ರಿಂದ ಎಲ್ಲೆಲ್ಲಿ ’83’ ಸಿನಿಮಾದ 3ಡಿ ಅವತರಣಿಕೆ ಬಿಡುಗಡೆಯಾಗುತ್ತೋ ಅಲ್ಲೆಲ್ಲಾ ವಿಕ್ರಾಂತ್ ರೋಣ ಕೂಡ 3ಡಿಯಲ್ಲಿ ಅಬ್ಬರಿಸಲಿದ್ದಾನೆ.

****

Written By
Kannadapichhar

Leave a Reply

Your email address will not be published. Required fields are marked *