News

31 ಕ್ಕೆ ನಾವೆಲ್ಲಾ ಸೂಸೈಡ್ ಮಾಡ್ಕೋಬೇಕಾ? ಗುರು ದೇಶಪಾಂಡೆ

31 ಕ್ಕೆ ನಾವೆಲ್ಲಾ ಸೂಸೈಡ್ ಮಾಡ್ಕೋಬೇಕಾ? ಗುರು ದೇಶಪಾಂಡೆ
  • PublishedDecember 23, 2021

ಡಿಸೆಂಬರ್ 31 ‍ಕ್ಕೆ ಲವ್ ಯೂ ರಚ್ಚು ಸಿನಿಮಾ ರಿಲೀಸ್ ಗೆ ರೆಡಿ ಮಾಡಿಕೊಳ್ಳಲಾಗಿದೆ. ಆದರೆ ಇದೇ ದಿನ ಬಂದ್ ಮಾಡಿದರೆ ಚಿತ್ರಕ್ಕೆ ತೊಂದರೆಯಾಗುತ್ತದೆ ಎನ್ನುವುದು ಗುರು ದೇಶಪಾಂಡೆ ಆಕ್ರೋಶಕ್ಕೆ ಕಾರಣ.


ಗುರು ದೇಶಪಾಂಡೆ ನಿರ್ಮಾಣದ ‘ಲವ್​ ಯೂ ರಚ್ಚು’ ಸಿನಿಮಾ ಅನೇಕ ಅಡೆತಡೆಗಳನ್ನು ಎದುರಿಸುತ್ತಿದೆ. ಈಗಾಗಲೇ ಚಿತ್ರತಂಡದಲ್ಲಿ ಬಿರುಕು ಮೂಡಿದೆ. ನಾಯಕ ನಟ ಅಜಯ್​ ರಾವ್​ ಅವರು ನಿರ್ಮಾಪಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಈ ನಡುವೆಯೂ ಸಿನಿಮಾವನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಡಿ.31ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಆದರೆ ಅದೇ ದಿನ ಕರ್ನಾಟಕ ಬಂದ್​ ಆಗುವ ಸಾಧ್ಯತೆ ಇದೆ. ಅದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿದರೆ ಚಿತ್ರರಂಗಕ್ಕೆ ತುಂಬ ತೊಂದರೆ ಆಗಲಿದೆ ಎಂದು ಗುರು ದೇಶಪಾಂಡೆ ಹೇಳಿದ್ದಾರೆ’ 31 ಕ್ಕೆ ನಾವೆಲ್ಲಾ ಸೂಸೈಡ್ ಮಾಡ್ಕೋಬೇಕಾ? ಶುಕ್ರವಾರ ಬಂದ್ ಮಾಡ್ತೀವಿ ಅಂತಾರೆ. ಅಷ್ಟು ಗೊತ್ತಾಗಲ್ವಾ ಇವರಿಗೆ? ಈ ದಿನ ಬಂದ್ ಮಾಡಿದರೆ ಎಷ್ಟು ಕೋಟಿ ಲಾಸ್ ಆಗುತ್ತೆ? ಇದರ ಬಗ್ಗೆ ಯೋಚನೆ ಮಾಡೋದು ಬೇಡ್ವಾ? ಮೊದಲೇ ನಮ್ ಹೀರೋ ಸಪೋರ್ಟ್ ಮಾಡ್ತಿಲ್ಲ, ಬಂದ್ ಅಂತಾರೆ ಇದೆಲ್ಲದರ ನಡುವೆ ನಮ್ಮ ಸಿನಿಮಾ ಓಡೋದು ಹೇಗೆ. ಏನು ಮಾಡಬೇಕು ಗೊತ್ತಾಗ್ತಿಲ್ಲ’ ಎಂದು ಗುರು ದೇಶಪಾಂಡೆ ಸಾ ರಾ ಗೋವಿಂದು ಮತ್ತು ಬಂದ್ ಬೆಂಬಲಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *