News

ಕನ್ನಡ ಕಿರುತೆರೆ ರಿಯಾಲಿಟಿ ಶೋ ಗೆ ಅನೀಲ್ ಕುಂಬ್ಳೆ..!

ಕನ್ನಡ ಕಿರುತೆರೆ ರಿಯಾಲಿಟಿ ಶೋ ಗೆ ಅನೀಲ್ ಕುಂಬ್ಳೆ..!
  • PublishedDecember 22, 2021

ಕರುನಾಡಿನ ಹೆಮ್ಮೆ ಭಾರತ ಕ್ರಿಕೇಟ್ ತಂಡದ ಮಾಜಿ ಕ್ರಿಕೇಟಿಗ, ಲೆಗ್ ಸ್ಪಿನ್ ಮಾಂತ್ರಿಕ ಅನೀಲ್ ಕುಂಬ್ಳೆ, ಕ್ರಿಕೇಟ್ ಅಂಗಳದಲ್ಲಿ ಬೌಲ್ ಮಾಡ್ತಿದ್ರೆ ಅದನ್ನು ನೋಡುವುದೇ ಒಂದು ಮಜ, ಎದುರಾಳಿ ಬ್ಯಾಟ್ಸ್ ಮನ್ ಎದೆಯಲ್ಲಿ ನಡುಕ ಹುಟ್ಟಿಸುವ ತಮ್ಮ ಬೌಲಿಂಗ್ ನಲ್ಲಿ ಮಿಂಚಿ ಟೆಸ್ಟ್ ಕ್ರಿಕೇಟ್ ನಲ್ಲಿ 10 ವಿಕೇಟ್ ಪಡೆದು ವಿಶ್ವ ದಾಖಲೆ ಬರೆದವರು. ಒಮ್ಮೆ ತಲೆಗೆ ಗಾಯವಾಗಿದ್ದರು ಬ್ಯಾಂಡೇಜ್ ಸುತ್ತಿಕೊಂಡು ಆಟವಾಡಿ ತಮ್ಮ ಬದ್ದತೆ ಮತ್ತು ದೇಶ ಪ್ರೇಮ ಮೆರೆದ ಪರಿಯನ್ನು ನೋಡಿದವರ ಕಣ್ಣಂಚಿನಲ್ಲಿ ನೀರು ತರಿಸಿದ್ದರು ಅನೀಲ್ ಕುಂಬ್ಳೆ. ಇವರು ನಮ್ಮ ಕನ್ನಡದವರು ಎನ್ನುವುದೆ ನಮೆಗೆಲ್ಲಾ ಹೆಮ್ಮೆ.

ಹೌದು ಈಗ್ಯಾಕೆ ಅನೀಲ್ ಕುಂಬ್ಳೆ ಬಗ್ಗೆ ಮಾತನಾಡುತ್ತಿದ್ದೇವೆ ಎಂದುಕೊಂಡ್ರ..? ಅದಕ್ಕೆ ಕಾರಣ ಇದೆ. ಅದೇನಂದ್ರೆ ಅವರು ಜೀ ಕನ್ನಡದ ಕಾರ್ಯಕ್ರಮವೊಂದಕ್ಕೆ ಗೆಸ್ಟ್ ಆಗಿ ಭಾಗವಹಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಅನಿಲ್ ಕುಂಬ್ಳೆ ಈ ವಾರ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ತೀರ್ಪುಗಾರರಾಗಿರುವ ಶೋನಲ್ಲಿ ಅನಿಲ್ ಕುಂಬ್ಳೆ ಕೂಡಾ ಹಾಡುಗಳನ್ನು ಎಂಜಾಯ್ ಮಾಡಲಿದ್ದಾರೆ.

ಅನೀಲ್ ಕುಂಬ್ಳೆ ಕೂಡ ಒಳ್ಳೆಯ ಹಾಡುಗಾರರು ಆಗಾಗ ಅವರು ಕನ್ನಡ ಹಾಡುಗಳನ್ನು ಹಾಡುತ್ತಿರುತ್ತಾರೆ, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗ್ತಿರತ್ತೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಿದ ಮನರಂಜನಾ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಕನ್ನಡದ ಅತ್ಯಂತ ಜನಪ್ರಿಯ ಮಾಮರ ಎಲ್ಲೋ ಕೋಗಿಲೆ ಎಲ್ಲೋ ಹಾಡು ಹಾಡಿದ್ರು. 1975ರಲ್ಲಿ ತೆರೆಕಂಡ ದೇವರ ಗುಡಿ ಚಿತ್ರದ ಈ ಗೀತೆಯನ್ನು ಚಿ ಉದಯ್ ಶಂಕರ್ ರಚನೆ, ರಾಜನ್ ನಾಗೇಂದ್ರ ಸಂಗೀತ ನೀಡಿದ ಈ ಹಾಡನ್ನು ಅನಿಲ್ ಕುಂಬ್ಳೆ ಹಾಡಿ ಕನ್ನಡಿಗರ ಮನ ತಣಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕುಂಬ್ಳೆ ಕೋಚ್ ಆಗಿ ಮಾರ್ಗದರ್ಶನ ನೀಡಿದ್ರು.


ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅನಿಲ್ ಕುಂಬ್ಳೆಯನ್ನು ಸಾಧಕರ ಸೀಟ್ ನಲ್ಲಿ ನೋಡಬೇಕು ಎಂದು ವೀಕ್ಷಕರು ಆಗ್ರಹಿಸಿದ್ದರು. ಆದರೆ ಅದು ಸಾಧ‍್ಯವಾಗಿರಲಿಲ್ಲ. ಈಗ ಸರಿಗಮಪ ಶೋನಲ್ಲಿ ಆ ಕನಸು ನನಸಾಗುತ್ತಿದೆ. ಅನಿಲ್ ಕುಂಬ್ಳೆ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *