News

ಪ್ರೇಮಿಗಳ ದಿನ (ಫೆ 14) ಪ್ರೇಮಂ ಪೂಜ್ಯಂ ಪಾರ್ಟ್ 2 ಗೆ ಚಾಲನೆ

ಪ್ರೇಮಿಗಳ ದಿನ (ಫೆ 14) ಪ್ರೇಮಂ ಪೂಜ್ಯಂ ಪಾರ್ಟ್ 2 ಗೆ ಚಾಲನೆ
  • PublishedDecember 21, 2021

ಸ್ಯಾಂಡಲ್ ವುಡ್ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25 ನೇ ಚಿತ್ರ ಪ್ರೇಮಂ ಪೂಜ್ಯಂ ಸಿನಿಮಾ 50 ದಿನಗಳ ಕಡೆ ಸಾಗುತ್ತಿರುವ ಬೆನ್ನಲ್ಲೆ, ನಿರ್ದೇಶಕ ಕಂ ನಿರ್ಮಾಪಕರಾದ ರಾಘವೇಂದ್ರ ಪ್ರೇಮಂ ಪೂಜ್ಯಂ 2 ಸುಳಿವು ನೀಡಿದ್ದಾರೆ. ‘ಪ್ರೇಮಂ ಪೂಜ್ಯಂ’ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನವಿರಾದ ಪ್ರೇಮ ಕಥೆ ಹೈಲೈಟ್​ ಆಗಿತ್ತು. ಈ ಚಿತ್ರ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಇಷ್ಟವಾಗಿತ್ತು. ಸಿನಿಮಾ ರಿಲೀಸ್​ ಆಗಿ 2 ತಿಂಗಳು ಪೂರ್ಣಗೊಳ್ಳುವ ಮೊದಲೇ ಸೀಕ್ವೆಲ್​ ಬಗ್ಗೆ ಅಪ್​ಡೇಟ್​ ಬಂದಿದೆ. ಪ್ರೇಮ್​ ಅವರ 26ನೇ ಚಿತ್ರವಾಗಿ ‘ಪ್ರೇಮಂ ಪೂಜ್ಯಂ 2′ ಬರಲಿದೆ.

ನೆನಪಿರಲಿ ಪ್ರೇಮ್ ಹಾಗೂ ನಿರ್ದೇಶಕ ಡಾ ಬಿ ಎಸ್ ರಾಘವೇಂದ್ರ ಜೋಡಿ ಮತ್ತೆ ಒಂದಾಗುತ್ತಿದೆ. 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಬಿಡುಗಡೆ ಬಳಿಕ ಮತ್ತೆ ಇದರ ಮುಂದುವರೆದ ಭಾಗದಲ್ಲಿ ನಟಿಸಲು ನೆನಪಿರ ಪ್ರೇಮ್ ನಿರ್ಧರಿಸಿದ್ದಾರೆ. ಸದ್ಯ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸುವುದರಲ್ಲಿದೆ. ಈ ಸಂಭ್ರಮದಲ್ಲಿರುವುವಾಗಲೇ ‘ಪ್ರೇಮಂ ಪೂಜ್ಯಂ 2’ ಸೆಟ್ಟೇರಿಸಲು ನಿರ್ದೇಶಕ ರಾಘವೇಂದ್ರ ಸಜ್ಜಾಗಿದ್ದಾರೆ. ಇದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಲವ್ ಸ್ಟೋರಿ ಆಗಿರುವುದರಿಂದ ಪ್ರೇಮಗಳ ದಿನದಂದೇ ಪಾರ್ಟ್ 2 ಆರಂಭಿಸಲು ಸಜ್ಜಾಗಿದ್ದಾರೆ.

2022ರ ಫೆಬ್ರವರಿ 14ರಂದು ಪ್ರೇಮಿಗಳ ದಿನ. ಅಂದೇ ‘ಪ್ರೇಮಂ ಪೂಜ್ಯಂ’ ಪಾರ್ಟ್ 2ಗೆ ಚಾಲನೆ ನೀಡಲು ಮುಂದಾಗಿದ್ದಕ್ಕೆ ಕಾರಣವಿದೆ. ಅಂದೇ ‘ಪ್ರೇಮಂ ಪೂಜ್ಯಂ’ ಸಿನಿಮಾ ಶತದಿನವನ್ನು ಪೂರೈಸಲಿದೆ. ಹೀಗಾಗಿ ಚಿತ್ರತಂಡ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. 100 ದಿನನೇ ದಿನ ತಮ್ಮ ‘ಪ್ರೇಮಂ ಪೂಜ್ಯಂ’ ಸಿನಿಮಾ 100 ಚಿತ್ರಮಂದಿರಗಳಲ್ಲಿ ಶತದಿನವನ್ನು ಆಚರಿಸಬೇಕು ಅನ್ನುವ ಆಸೆ ಚಿತ್ರತಂಡದ್ದು. ಹೀಗಾಗಿ ಚಿತ್ರಮಂದಿರಗಳನ್ನು ಹೆಚ್ಚಿಸುತ್ತಿದೆ. ಸದ್ಯ 63 ಚಿತ್ರಮಂದಿರಗಳಲ್ಲಿ ‘ಪ್ರೇಮಂ ಪೂಜ್ಯಂ’ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *