ಕನ್ನಡ ಬಾವುಟ ಸುಟ್ಟವ್ರ ವಿರುದ್ಧ ಪ್ರಜ್ವಲ್ ಗರಂ..
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆಯನ್ನು ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ತುಂಬ ಗಂಭೀರವಾಗಿ ಪರಿಗಣಿಸಿದ್ದು ಪ್ರಕರಣದ ವಿರುದ್ದ ಹಲವು ಕಲಾವಿದರು ಪ್ರಕರಣವನ್ನು ಖಂಡಿಸಿ ಪ್ರತಿಕ್ರಿಯಿಸಿದ್ದಾರೆ, ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಾತನಾಡಿ ‘ನಮ್ಮ ದ್ವಜಕ್ಕೆ ಬೆಂಕಿ ಹಚ್ಚಿರುವುದು ತುಂಬ ದುಖಃ ಕೊಡುವಂತ ವಿಷಯ, ಹೊರಗಡೆಯವರಿಗೆಲ್ಲಾ ಕನ್ನಡಿಗರು ಒಳ್ಳೆಯವರು ಎಂದು ಗೊತ್ತು, ಹೊರಗಿನಿಂದ ಯಾರೇ ಇಲ್ಲಿಗೆ ಬಂದ್ರು ಅನ್ನ ಕೊಟ್ಟು, ಪ್ರೀತಿ ಕೊಟ್ಟು ಕೆಲಸ ಕೊಟ್ಟು ಅಣ್ಣ ತಮ್ಮಂದಿರಂತೆ ಕಾಣುತ್ತೇವೆ ಬಹುಶಃ ಅದೇ ತಪ್ಪಾಗೋಯ್ತಾ ಅಂತ ಅನ್ನಿಸ್ತಿದೆ. ನಮ್ಮಹಾಗೆ ಅವರು ಕೂಡ ಪ್ರೀತಿ ವಿಶ್ವಾಸದಿಂದ ಇರಬೇಕು. ಆದ್ರೆ ಅವರು ಮಾಡುತ್ತಿರುವುದನ್ನು ನೋಡ್ತಿದ್ರೆ ಬೇಜಾರಾಗತ್ತೆ, ಬೆಳಗಾವಿಯಲ್ಲೆ ನನ್ನ ಅಭಿಮಾನಿ ಸಂಘವು ಕೂಡ ಇದೆ, ಎರಡು ಬಾರಿ ನಾನು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿದ್ದೇವೆ, ಅಲ್ಲಿರುವ ನಮ್ಮ ಜನಕ್ಕೆ ಕನ್ನಡದ ಬಗ್ಗೆ ಎಷ್ಟೊಂದು ಅಭಿಮಾನ ಇದೆ ಅಂತ ಗೊತ್ತು. ನಮ್ಮ ಜನರಿಗೆ ಏನೇ ತೊಂದ್ರೆ ಆದ್ರು ನಾನು ಇರ್ತೀವಿ ನಮ್ಮ ಅಧಿಕಾರಿಗಳು ಇರ್ತಾರೆ, ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದರು.
ನಿನ್ನೆ ಬಡವ ರಾಸ್ಕಲ್ ಪ್ರಿ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ಶಿವರಾಜುಮಾರ್ ನಮ್ಮ ಹೋರಾಟ ಬರಿ ಟ್ವೀಟ್ ಮಾಡಿಕೊಂಡು ಸುಮ್ಮನಿದ್ದು ಬಿಡುವದಕ್ಕೆ ಸೀಮಿತವಾಗಬಾರದು ನಾವು ಒಗ್ಗಟ್ಟಿನಿಂದ ಪ್ರಕರಣದ ವಿರುದ್ದ ಹೋರಾಡಬೇಕು ಕರ್ನಾಟಕದಲ್ಲಿ ನಮ್ಮ ಭಾಷೆಗೆ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ. ಇದರಿಂದಾನೇ ಪ್ರಾಣ ಹೋಗಬೇಕೆಂದರೆ ಹೋಗಲಿ ಬಿಡಿ. ಬಾವುಟ ಸುಟ್ಟು ಹಾಕಿದ್ದು, ತಾಯಿಯನ್ನೇ ಸುಟ್ಟಂತೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ರು.
****