News

ಅಜಯ್ ರಾವ್ & ಗುರು ದೇಶಪಾಂಡೆ ವೈಮನಸ್ಸು ನಿಜಾನಾ?

ಅಜಯ್ ರಾವ್ & ಗುರು ದೇಶಪಾಂಡೆ ವೈಮನಸ್ಸು ನಿಜಾನಾ?
  • PublishedDecember 17, 2021

ಲವ್ ಯೂ ರಚ್ಚು ಚಿತ್ರದ ಟ್ರೈಲರ್ ನಿನ್ನೆ (ಡಿ.16) ಬಿಡುಗಡೆ ಆಗಿ ಸಖತ್ ಸೌಂಡ್ ಮಾಡ್ತಿದೆ. ರೊಮ್ಯಾನ್ಸ್, ಸಸ್ಪೆನ್ಸ್ ಕಂ ಥ್ರಿಲ್ಲರ್ ಜಾನರ್ ನಲ್ಲಿ ಮೂಡಿಬಂದಿರುವ ಟ್ರೈಲರ್ ನೋಡಿರುವ ಸಿನಿ ಪ್ರೀಯರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ಈ ನಡುವೆ ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ್ರು. ಆದ್ರೆ ಚಿತ್ರದ ನಾಯಕ ಆಜಯ್ ರಾವ್ ಕಾರ್ಯಕ್ರಮಕ್ಕೆ ಭಾಗವಹಿಸದೆ ಗೈರಾಗಿದ್ರು.. ಈಗಾಗಲೆ ನಿರ್ಮಾಪಕ ಗುರು ದೇಶಪಾಂಡೆ ಮತ್ತು ಅಜಯ್ ರಾವ್ ನಡುವೆ ಭಿನ್ನಾಭಿಪ್ರಾಯ  ಮೂಡಿದೆ ಎಂಬ ಸುದ್ದಿಗೆ ಅಜಯ್ ಅವರ ಗೈರು ಮತ್ತಷ್ಟು ಪುಷ್ಟಿ ನೀಡಿತು, ಅಲ್ಲದೆ ಗಾಂಧಿ ನಗರದಲ್ಲೂ ಈ ಬಗ್ಗೆ ಗುಸು ಗುಸು ಜೋರಾಗೆ ನಡೇತಿದೆ.

ಲವ್ ಯೂ ರಚ್ಚು ಚಿತ್ರದ ವಿವಾದ ಇಂದು ನಿನ್ನೆಯದಲ್ಲಾ, ಮೊದಲಿನಿಂದಲು ಸಾಕಷ್ಟು ವಿವಾದಗಳನ್ನೆ ಅಂಟಿಸಿಕೊಂಡು ಬರುತ್ತಿದೆ ಹಾಗಿದ್ರೆ ಏನು ಆ ವಿವಾದ ಅಂತೀತಾ ಮುಂದೆ ಓದಿ…

‘ಲವ್ ಯೂ ರಚ್ಚು’ ಸಿನಿಮಾ ಟೈಟಲ್ ಅನೌನ್ಸ್ ಆದಾಗಿನಿಂದ ಟ್ರೇಲರ್ ಲಾಂಚ್ ಆಗಿ, ಚಿತ್ರ ಬಿಡುಗಡೆ ದಿನ ಹತ್ತಿರಕ್ಕೆ ಬರುತಿರುವಾಗಲು ಒಂದಿಲೊಂದು ಕಾರಣಕ್ಕೆ ಸುದ್ದಿಯಾಗ್ತಿದೆ ಲವ್ ಯೂ ರಚ್ಚು. ಪ್ರಾರಂಭದಲ್ಲಿ ಚಿತ್ರದ ಶೀರ್ಷಿಕೆ ವಿಚಾರವಾಗಿ ಸುದ್ದಿಯಾಗಿತ್ತು, ನಂತರ, ಚಿತ್ರದ ಸಾಹಸ ಕಲಾವಿದರಾದ ಫೈಟರ್ ವಿವೇಕ್ ಎಂಬುವವರು ಶೂಟಿಂಗ್ ವೇಳೆ ನಡೆದ ವಿದ್ಯುತ್ ಅವಘಡದಲ್ಲಿ ಸಾವಿಗೀಡಾಗಿದ್ದರು. ಆಗ ಚಿತ್ರ ನಿರ್ದೇಶಕ ಮತ್ತು ಕೆಲವು ತಂತ್ರಜ್ಞರನ್ನು ಪೊಲೀಸ್ ವಶಕ್ಕೆ ಪಡೆದಿದ್ದರು, ಘಟನೆಯ ನಂತರ ನಿರ್ಮಾಪಕರಾದ ಗುರು ದೇಶಪಾಂಡೆಯವರು ತಲೆಮರೆಸಿಕೊಂಡಿದ್ದರು ಆಗಲೂ ಸಾಕಷ್ಟು ಸುದ್ದಿಯಾಗಿತ್ತು.

ಫೈಟರ್ ವಿವೇಕ್ ಸಾವು ಸಂಭವಿಸಿ ಇನ್ನು ವಾರಗಳು ಕಳೆದಿರಲಿಲ್ಲಾ ಅಷ್ಟರಲ್ಲಿ ಚಿತ್ರದ ನಾಯಕಿ ರಚಿತಾ ರಾಮ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದನು ಹಲವು ನೆಟ್ಟಿಗರು ಟೀಕಿಸಿ ಕಮೆಂಟ್ ಹಾಕಿದ್ದರು. ಇದರಿಂದ ಮುಜುಗರಕ್ಕೀಡಾದ ರಚಿತಾ ಕ್ಷಮೆಯಾಚಿಸಿದ್ರು.

ಮತ್ತೆ ಫೈಟರ್ ವಿವೇಕ್ ತಾಯಿಗೆ ಚಿತ್ರ ತಂಡದಿಂದ ಪರಿಹಾರ ಕೊಡುವುದಾಗಿ ಘೋಷಣೆ ಮಾಡಿತ್ತು, ನಂತರ ತಮಗೆ ಚಿತ್ರತಂಡದಿಂದ ಯಾವುದೇ ಸಹಾಯ ಸಿಕ್ಕಿಲ್ಲಾ ಎಂದು ಆರೋಪಿಸಿ ಮಾಧ್ಯಮದವರೊಂದಿಗೆ ವಿವೇಕ್ ತಾಯಿ ಅಳಲು ತೋಡಿಕೊಂಡಿದ್ರು. ನಂತರದಲ್ಲಿ ಗುರು ದೇಶಪಾಂಡೆ ಜಾಮೀನು ಪಡೆದು ಬಂದ ನಂತರ ಫೈಟರ್ ವಿವೇಕ್ ತಾಯಿಗೆ ಚೆಕ್ ಕೊಡುವ ಮೂಲಕ ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು.

ಎಲ್ಲವೂ ಮುಗಿದು ಚಿತ್ರದ ಪ್ರಚಾರ ಮಾಡಬೇಕೆನ್ನುವ ಸಂದರ್ಭದಲ್ಲಿ ಚಿತ್ರದ ನಾಯಕಿ ಡಿಂಪಲ್ ಕ್ವೀನ್ ರಚಿತಾ ರಾಮ್ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಿದ್ದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಫಸ್ಟ್ ನೈಟ್ ಅಲ್ಲಿ ನೀವೇನು ಮಾಡ್ತೀರೋ ಅದನ್ನೆ ನಾವು ಇಲ್ಲಿ ಮಾಡಿದ್ದೇವೆ, ಚಿತ್ರಕ್ಕೆ ಅಗತ್ಯವಿರುವ ಸನ್ನಿವೇಶದಲ್ಲಿ ಅಭಿನಯಿಸುವುದು ನನ್ನ ಧರ್ಮ ಅದನ್ನ ನಾನು ಇಲ್ಲಿ ಮಾಡಿದ್ದೇನೆ ಎಂದು ಹೇಳಿಕೆ ನೀಡಿ ಸಕತ್ ಟ್ರೋಲ್ ಆಗಿದ್ರು.

ಈಗ ಟ್ರೇಲರ್ ಲಾಂಚ್ ಕಾರ್ಕ್ರಮಕ್ಕೆ ಅಜಯ್ ರಾವ್ ಅವರ ಗೈರು ಮತ್ತೆ ಸುದ್ದಿಯಾಗುತ್ತಿದೆ. ವಿವಾದ ಏನೇ ಇರಲಿ ಇದೆಲ್ಲದರಲ್ಲೂ ಲವ್ ಯೂ ರಚ್ಚು ಸಿನಿಮಾ ತನ್ನ ಪ್ರಮೋಶನ್ ಅನ್ನು ಚೆನ್ನಾಗೆ ಮಾಡಿಕೊಂಡಿದೆ. ಡಿಸೆಂಬರ್ 31 ರಂದು ಬಿಡುಗಡೆ ಆಗುತ್ತಿರುವ ಈ ಚಿತ್ರವನ್ನು ಪ್ರೇಕ್ಷಕ ಪ್ರಭು ಹೇಗೆ ಸ್ವೀಕರಿಸುತ್ತಾನೋ ಕಾದು ನೋಡಬೇಕಿದೆ.

****

Written By
Kannadapichhar

Leave a Reply

Your email address will not be published. Required fields are marked *