ಡಾಲಿ ಧನಂಜಯ್ ಅರಸೀಕೆರೆ Express ಇದ್ದಂಗ್ಗೆ: ರಂಗಾಯಣ ರಘು!
ಡಾಲಿ ಧನಂಜಯ ಅವರು ನಟನೆಯ ಬಡವ ರಾಸ್ಕಲ್ ಚಿತ್ರ ರಾಜ್ಯದಲ್ಲಿ ಈಗಾಗಲೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇಂದು (ಡಿ.13) ಟ್ರೈಲರ್ ಲಾಂಚ್ ಮಾಡಲಾಗಿದೆ. ಧನಂಜಯ್ ನಟನೆಗಷ್ಟೆ ಸೀಮಿತವಾಗದೆ ಜೊತೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ‘ಬಡವ ರಾಸ್ಕಲ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆದಿದೆ.
ಈ ವೇಳೆ ಮಾತನಾಡಿದ ರಂಗಾಯಣ ರಘು “ ನಾನು ಇಂಡಸ್ಟ್ರಿಗೆ ಬಂದು 26 ವರ್ಷ ಆದ್ರು ಸಿನಿಮಾ ಪ್ರಡ್ಯೂಸ್ ಮಾಡ್ಬೇಕು ಅಂತ ಇನ್ನು ಅನ್ಸಿಲ್ಲಾ, ಆದ್ರೆ ಧನಂಜಯ್ ಅರಸೀಕೆರೆ ಎಕ್ಸ್ಪ್ರೆಸ್ , ಧೈರ್ಯ ಜಾಸ್ತಿ, ಮೊದಲೇ ತೆಂಗಿನ ಕಾಯಿ ಭಾಗದವ್ರು,ಕಾಯಿ ಕೆಡೋದಿಲ್ಲ, ಕಾಯಿ ಒಣಗಿದಷ್ಟು ಬೆಲೆ ಜಾಸ್ತಿ, ಹಾಗೆ ಧನಂಜಯ್ ಇಂಡಸ್ಟ್ರಿಗೆ ಬರೋವಾಗ್ಲೆ ಚೆನ್ನಾಗಿ ಒಣಗಿಬಿಟ್ಟಿದ್ದಾನೆ. ಅವನು ಸಿನಿಮಾದಿಂದ ಸಿನಿಮಾಗೆ ಅಂತ ಬದುಕ್ತಿದ್ದಾನೆ ಎಂದು ಡಾಲಿ ನಿರ್ಮಾಣದ ಧೈರ್ಯದ ಕುರಿತು ರಂಗಾಯಣ ರಘು ಮೆಚ್ಚುಗೆ ವ್ಯಕ್ತಪಡಿಸಿದರು.
‘ಡಾಲಿ ಪಿಕ್ಚರ್’ ಬ್ಯಾನರ್ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಕೆಆರ್ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.
****