News

ರಚಿತಾ ರಾಮ್‌ ಕೈಯಲ್ಲಿವೆ ಬರೋಬ್ಬರಿ 15 ಪಿಚ್ಚರ್‌ಗಳು

ರಚಿತಾ ರಾಮ್‌ ಕೈಯಲ್ಲಿವೆ ಬರೋಬ್ಬರಿ 15 ಪಿಚ್ಚರ್‌ಗಳು
  • PublishedDecember 8, 2021

ಕನ್ನಡದಲ್ಲಿ ಸದ್ಯ ಯಾರಪ್ಪ ಬ್ಯುಸಿಯಾಗಿರೋ ಹೀರೋಯಿನ್‌ ಅಂದ್ರೆ ಕನ್‌ಫರ್ಮ್‌ ಆಗಿ ಕಣ್ಣು ಮುಚ್ಚಿಕೊಂಡು ಹೇಳಬಹುದು, ಅದು ಕನ್ನಡಿಗರನ್ನ ತಮ್ಮ ಗುಳಿಕೆನ್ನೆ ಒಳಗೆ ಬೀಳಿಸಿಕೊಂಡ ಡಿಂಪಲ್‌ ಕ್ವೀನ್‌ ರಚಿತಾರಾಮ್‌ ಅಂತ. ರಚಿತಾರಾಮ್‌ ಅಭಿನಯದ ಯಾವೊಂದು ಸಿನಿಮಾ ಕೂಡ ಕಳೆದ 2 ವರ್ಷದಿಂದ ರಿಲೀಸ್‌ ಆಗಿಲ್ಲ. ಕೋವಿಡ್‌ ಇರೋ ಕಾರಣ ಕಳೆದರಡು ವರ್ಷದಿಂದ ಬಹುತೇಕ ಸಿನಿಮಾಗಳು ರಿಲೀಸೇ ಆಗಿಲ್ಲ. ಆದ್ರೆ ರಚಿತಾ ರಾಮ್‌ ಡಿಮ್ಯಾಂಡ್‌ ಕಮ್ಮಿ ಆಗಿಲ್ಲ.

ಕಳೆದ ತಿಂಗಳು ರಚಿತಾ ಪೋಷಕ ಪಾತ್ರದಲ್ಲಿ ನಟಿಸಿದ್ದ 100 ಸಿನಿಮಾ ರಿಲೀಸ್‌ ಆಗಿದ್ದು, ಬಿಟ್ರೆ ಈ ವರ್ಷದ ಕೊನೆಯ ದಿನ 31ನೇ ಡಿಸೆಂಬರ್‌ಗೆ ರಿಲೀಸ್‌ ಆಗ್ತಾ ಇರೋ ಲವ್‌ ಯೂ ರಚ್ಚುನೇ ಎರಡೂ ವರ್ಷದ ನಂತ್ರ ರಿಲೀಸ್‌ ಆಗ್ತಾ ಇರೋ ರಚಿತಾ ರಾಮ್‌ ನಾಯಕ ನಟಿಯಾಗಿರೋ ಸಿನಿಮಾ, ಈ ಸಿನಿಮಾದ ಹೊರತಾಗಿಯೂ ರಚಿತಾ ಬರೋಬ್ಬರಿ 15 ಸಿನಿಮಾಗಳಿಗೆ ನಾಯಕಯಾಗಿದ್ದಾರೆ. ಅವುಗಳಲ್ಲಿ ಕಡಿಮೆ ಅಂದ್ರೆ 8 ಸಿನಿಮಾಗಳು ಮುಂದಿನ ವರ್ಷ ರಿಲೀಸ್‌ ಅಗೋದು ಪಕ್ಕಾ..

ಸಧ್ಯ ಇಲ್ಲಿಯವರೆಗೂ ರಚಿತಾರಾಮ್‌ ನಾಯಕಿ ಅಂತ ಅನೌನ್ಸ್‌ ಆಗಿರೋ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಅದ್ರಲ್ಲಿ ಪ್ರಮುಖ ಅಂದ್ರೆ ದರ್ಶನ್‌ಗೆ ಮತ್ತೆ ನಾಯಕಿಯಾಗಿರೋ ಕ್ರಾಂತಿ, ರಿಲೀಸ್‌ಗೆ ರೆಡಿಯಾಗಿರೋ ಏಕ್‌ ಲವ್‌ ಯಾ, ಮಾನ್ಸುನ್‌ ರಾಗ, ರವಿಬೋಪಣ್ಣ.. ಈ ಸಿನಿಮಾ ನಂತ್ರ ಪ್ರಜ್ವಲ್‌ ದೇವರಾಜ್‌ ಜೊತೆಗೆ ವೀರಂ, ನಿನಾಸಂ ಸತೀಶ್‌ ಜೊತೆಗೆ ಮ್ಯಾಟ್ನಿ, ಅಭಿಶೇಕ್‌ ಅಂಬರೀಶ್‌ಗೆ ಜೋಡಿಯಾಗಿ ಬ್ಯಾಡ್‌ ಮ್ಯಾನರ್ಸ್‌, ಧನಂಜಯಗೆ ಜೋಡಿಯಾಗಿರೋ ಡಾಲಿ, ಯಶಸ್‌ ಸೂರ್ಯಗೆ ನಾಯಕಿಯಾಗಿರೋ ಗರಡಿ, ಪಂಕಜ ಕಸ್ತೂರಿ,ಲವ್‌ ಮಿ ಆರ್‌ ಹೇಟ್‌ ಮಿ ಮುಂತಾದವು.

ಇನ್ನೂ ಡಿಂಪಲ್‌ ಕ್ವೀನ್‌ ನಟಿಸ್ತಾ ಇರೋ ನಾಯಕಿ ಪ್ರಧಾನ ಸಿನಿಮಾಗಳು ಕೂಡ ಇವೆ.ಲಿಲ್ಲಿ, ಏಪ್ರಿಲ್‌, ಶಬರಿ ಇತ್ಯಾದಿ.. ಈ ಎಲ್ಲಾ ಸಿನಿಮಾಗಳ ಜೊತೆಗೆ ರಚಿತಾ ರಾಮ್‌ ಸಧ್ಯ ಟಾಲಿವುಡ್‌ ಕಡೆಗೂ ಹೊರಟಿದ್ದು, ಸೂಪರ್‌ ಮಚ್ಚಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಚಂದನ್‌ ಶೆಟ್ಟಿ ಅವ್ರ ಜೊತೆಗಿನ ಲ್ಯಾಂಬೋರ್ಗಿನಿ ಹಾಡಿನಲ್ಲೂ ರಚ್ಚು ಮಿಂಚಿದ್ದಾರೆ. ಏನೇ ಹೇಳಿ ರಚಿತಾಗೆ ಸ್ಯಾಂಡಲ್‌ವುಡ್‌ನಲ್ಲಿ ಡಿಮಾಂಡಪ್ಪೋ ಡಿಮಾಂಡು..

Written By
Kannadapichhar

Leave a Reply

Your email address will not be published. Required fields are marked *