News

‘ಮದಗಜ’ ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ

‘ಮದಗಜ’ ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ
  • PublishedDecember 3, 2021

ನಟ ‘ರೋರಿಂಗ್​ ಸ್ಟಾರ್​’ ಶ್ರೀಮುರಳಿ ಅಭಿಮಾನಿಗಳಿಗೆ ಇಂದು (ಡಿ.3) ನಿಜಕ್ಕೂ ಹಬ್ಬ. ರಾಜ್ಯಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅದಕ್ಕೆ ಕಾರಣ ಆಗಿರುವುದು ‘ಮದಗಜ’ ಸಿನಿಮಾ ರಿಲೀಸ್​. ಅದ್ದೂರಿ ಬಜೆಟ್​ನಲ್ಲಿ ಮೂಡಿಬಂದಿರುವ ಈ ಸಿನಿಮಾ ಇಂದು ಎಲ್ಲೆಡೆ ತೆರೆಕಾಣುತ್ತಿದೆ. ಆಶಿಕಾ ರಂಗನಾಥ್​ ಮತ್ತು ಶ್ರೀಮುರಳಿ ಜೋಡಿಯಾಗಿ ನಟಿಸಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಿರ್ದೇಶಕ ಮಹೇಶ್​ ಕುಮಾರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಕಾಂಬಿನೇಷನ್​ನಲ್ಲಿ ‘ಮದಗಜ’ ಮೂಡಿಬಂದಿದೆ. ಮೊದಲ ದಿನ ಈ ಸಿನಿಮಾಗೆ ಗ್ರ್ಯಾಂಡ್​ ಓಪನಿಂಗ್​ ಸಿಗುತ್ತಿದೆ.

25 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಮದಗಜ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸುಮಾರು ಕರ್ನಾಟಕದಲ್ಲಿಯೇ ಸುಮಾರು 800 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಈಗಾಗಲೇ ಹಲವೆಡೆ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

‘ಮದಗಜ’ ಸ್ಯಾಂಡಲ್‌ವುಡ್‌ನ ಲಕ್ಕಿ ತಿಂಗಳು ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿರುವ ಬಿಗ್ ಬಜೆಟ್ ಸಿನಿಮಾ. ಬಿಡುಗಡೆಗೂ ಮುನ್ನವೇ ‘ಮದಗಜ’ ದೊಡ್ಡ ಮಟ್ಟದಲ್ಲಿಯೇ ವ್ಯಾಪಾರ ಮಾಡಿದೆ. ಡಬ್ಬಿಂಗ್, ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. ಥಿಯೇಟರ್‌ನಲ್ಲೂ ‘ಮದಗಜ’ ಶ್ರೀಮುರಳಿಗೆ ಅದ್ಧೂರಿ ಸ್ವಾಗತ ಕೋರಲು ಅಭಿಮಾನಿಗಳು ರೆಡಿಯಾಗಿದ್ದಾರೆ. ಈ ಮಧ್ಯೆ ಹಲವೆಡೆ ಫಸ್ಟ್ ಡೇ ಫಸ್ಟ್ ಶೋ ಫುಲ್ ಆಗಿದೆ. ಆ ಸಿನಿಮಾ ಮಂದಿರಗಳ ಲಿಸ್ಟ್ ಇಲ್ಲಿದೆ.



ರಾಜ್ಯದ 186 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಟಿಕೆಟ್ ಮುಂಗಡವಾಗಿ ಬಿಕರಿಯಾಗಿವೆ. ಫಸ್ಟ್ ಶೋ ಹಾಗೂ ಮ್ಯಾಟನಿ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಧಾರವಾಡದ ಪದ್ಮ ಟಾಕೀಸ್, ಶಿವಮೊಗ್ಗ ಭರತ್ ಸಿನಿಮಾದ ಎಲ್ಲಾ ಶೋಗಳು ಫುಲ್ ಆಗಿವೆ. ಗದಗದ ಮಹಾಲಕ್ಷ್ಮಿ ಥಿಯೇಟರ್ ಮೊದಲ ಮೂರು ಶೋ ಫುಲ್. ರಾಣೆಬೆನ್ನೂರು ಶಂಕರ್ ಟಾಕೀಸ್ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಿವೆ.

ಬೆಂಗಳೂರಿನಲ್ಲೂ ಸಿನಿಮಾ ನೋಡುವುದಕ್ಕೆ ಜನರು ಕಾತುರರಾಗಿದ್ದಾರೆ. ನವರಂಗ್ ಚಿತ್ರಮಂದಿರದ ಎರಡು ಶೋ ಫುಲ್ ಆಗಿದೆ. ಪ್ರಸನ್ನ ಥಿಯೇಟರ್‌ನಲ್ಲಿ ಮೊದಲ ಮೂರು ಶೋ ಫುಲ್. ಓಲ್ಡ್ ಮದ್ರಾಸ್ ರಸ್ತೆಯ ಪಿವಿಆರ್ ಮೊದಲ ಶೋ ಫುಲ್. ವೆಗಾ ಸಿಟಿ ಪಿವಿಆರ್, ಜಿಟಿ ವರ್ಲ್ಡ್ ಪಿವಿಆರ್ ಈ ಎಲ್ಲಾ ಕಡೆಯಲ್ಲೂ ಮೊದಲ ಶೋ ಟಿಕೆಟ್‌ಗಳು ಮಾರಾಟ ಆಗಿವೆ.

****

Written By
Kannadapichhar

Leave a Reply

Your email address will not be published. Required fields are marked *