News

ಮಗನ ಸಿನಿಮಾ ‘ಮುಗಿಲ್​ಪೇಟೆ’ ಮೆಚ್ಚಿದ ಕ್ರೇಜಿ ಸ್ಟಾರ್!

ಮಗನ ಸಿನಿಮಾ ‘ಮುಗಿಲ್​ಪೇಟೆ’ ಮೆಚ್ಚಿದ ಕ್ರೇಜಿ ಸ್ಟಾರ್!
  • PublishedNovember 20, 2021

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ‘ಮುಗಿಲ್​ಪೇಟೆ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಖಯಾದು ಲೋಹರ್ ಚಿತ್ರದ ನಾಯಕಿ. ‘ಮುಗಿಲ್​ಪೇಟ್​’ ಸಿನಿಮಾ ನ.19ರಂದು ರಿಲೀಸ್​ ಆಗಿದೆ. ರವಿಚಂದ್ರನ್​ ಅವರು ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮಗನ ಸಿನಿಮಾ ಹೇಗಿದೆ ಎಂಬುದನ್ನು ಅವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

‘ಮಕ್ಕಳು ಸಿನಿಮಾ ಮಾಡ್ತಿದಾರೆ ಎಂದರೆ ನಾನು ತಲೆ ಹಾಕಲ್ಲ. ಅವರಿಗೆ ಜವಾಬ್ದಾರಿ ನೀಡಿದ್ದೇನೆ. ಮನು ಸಾಫ್ಟ್​ ನೇಚರ್​. ಸಿನಿಮಾದಲ್ಲಿ ಭಿನ್ನವಾಗಿ ಅವನು ಕಾಣಿಸಿಕೊಂಡಿದ್ದಾನೆ. ಭವಿಷ್ಯಕ್ಕೆ ಓರ್ವ ಪ್ರಾಮಿಸಿಂಗ್​ ಹೀರೋ ಆಗಿ ಮನು ಕಾಣಿಸಿಕೊಂಡಿದ್ದಾನೆ. ಇಡೀ ಸಿನಿಮಾ ಎಲ್ಲಿಯೂ ಬೇಸರ ತರಿಸುವುದಿಲ್ಲ. ಸಿನಿಮಾ ಶೂಟಿಂಗ್​ ಲೊಕೇಷನ್​ ಚೆನ್ನಾಗಿದೆ’ ಎಂದರು ರವಿಚಂದ್ರನ್​.

ರಿಷಿ, ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಮೊದಲಾದ ಕಲಾವಿದರು ‘ಮುಗಿಲ್ ಪೇಟೆ’ಯಲ್ಲಿ ಅಭಿನಯಿಸಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ, ಮೋಹನ್ ನೃತ್ಯ ನಿರ್ದೇಶನ ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರವನ್ನು ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *