News

‘ಪ್ರೇಮಂ ಪೂಜ್ಯಂ’ ಇಂದು ರಾಜ್ಯಾದ್ಯಂತ ತೆರೆಗೆ

‘ಪ್ರೇಮಂ ಪೂಜ್ಯಂ’ ಇಂದು ರಾಜ್ಯಾದ್ಯಂತ ತೆರೆಗೆ
  • PublishedNovember 12, 2021

ನಟ ‘ನೆನಪಿರಲಿ’ ಪ್ರೇಮ್​ ಅಭಿನಯದ ‘ಪ್ರೇಮಂ ಪೂಜ್ಯಂ’ ಸಿನಿಮಾ ಭಾರಿ ನೀರೀಕ್ಷೆ ಮೂಡಿಸಿತ್ತು. ಇಂದು (ನ.12) ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಹಳೇ ಚಾರ್ಮ್​ ಮರಳುತ್ತಿದೆ. ಎರಡನೇ ಲಾಕ್​ಡೌನ್​ ಬಳಿಕ ಮಂಕಾಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ.

ಹಲವು​ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗುತ್ತಿವೆ. ಆ ಪೈಕಿ ‘ಪ್ರೇಮಂ ಪೂಜ್ಯಂ’ ಚಿತ್ರ ಗಮನ ಸೆಳೆಯುತ್ತಿದೆ. ಬೃಂದಾ ಆಚಾರ್ಯ, ಐಂದ್ರಿತಾ ರೇ ಸಾಧುಕೋಕಿಲ ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ. ಗುರುವಾರವೇ (ನ.11) ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಾಗಿ ಈ ಸಿನಿಮಾದ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರ ನೋಡಿದ ಬಳಿಕ ಪ್ರೇಮ್​ ಮತ್ತು ತಂಡದ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಶರಣ್​ ಅವರಿಗೆ ಈ ಚಿತ್ರ ಸಖತ್​ ಇಷ್ಟವಾಗಿದೆ. ‘ಪ್ರೇಮಂ ಎಂಬ ಹೆಸರಿನ ರೀತಿಯೇ ಈ ಚಿತ್ರತಂಡಕ್ಕೆ ಸಿನಿಮಾ ಮೇಲೆ ಇರುವ ಪ್ರೇಮವು ಪ್ರತಿ ಫ್ರೇಮ್​ನಲ್ಲಿ ಕಾಣಿಸುತ್ತದೆ. ನಿರ್ದೇಶಕರ ಕನಸು ತುಂಬ ಕಲರ್​ಫುಲ್​ ಆಗಿ ಮೂಡಿಬಂದಿದೆ. ಡಾ. ರಾಘವೇಂದ್ರ ಅವರು ಮೊದಲ ನಿರ್ದೇಶನದ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಪ್ರೇಮ್​ ಅವರನ್ನು ಇನ್ನಷ್ಟು ಚೆನ್ನಾಗಿ ತೋರಿಸಲಾಗಿದೆ. ಇಡೀ ತಂಡದವರು ಮನಪೂರ್ವಕವಾಗಿ ಕೆಲಸ ಮಾಡಿದ್ದಾರೆ’ ಎಂದು ಶರಣ್​ ಹೊಗಳಿದ್ದಾರೆ.

ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಅವರು ಸಹ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ‘ಪ್ರೇಮ್​ ಹೀರೋ ಎಂದುಕೊಂಡು ಈ ಸಿನಿಮಾ ನೋಡಲು ಬಂದೆ. ಆದರೆ ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಯಿತು ಇದು ಮಲ್ಟಿಸ್ಟಾರ್​ ಚಿತ್ರ. ನಿರ್ದೇಶಕ ರಾಘವೇಂದ್ರ ಮತ್ತು ಛಾಯಾಗ್ರಾಹಕ ನವೀನ್​ ಅವರನ್ನು ಕೂಡ ಈ ಸಿನಿಮಾದ ಹೀರೋಗಳು ಅಂತ ನಾನು ಹೇಳುತ್ತೇನೆ. ಈ ಮೂವರ ಜುಗಲ್​ಬಂದಿ ಚೆನ್ನಾಗಿ ಮೂಡಿಬಂದಿದೆ. ಒಂದು ಫ್ರೇಮ್​ ಕೂಡ ರಾಜಿ ಆಗಿಲ್ಲ’ ಎಂದು ತರುಣ್​ ಸುಧೀರ್​ ಹಾಡಿ ಹೊಗಳಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *