5 ಭಾಷೆಗಳಲ್ಲಿ ‘ತೋತಾಪುರಿ’ ಆದ್ರು ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲಾ..!

ನವರಸ ನಾಯಕ ಜಗ್ಗೇಶ್ ಮತ್ತು ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರ ತೋತಾಪುರಿ. ಈ ಚಿತ್ರ ಈಗ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ತೋತಾಪುರಿ ಸಿನಿಮಾ ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಹಾಗಾಗಿ ‘ತೋತಾಪುರಿ’ ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ಆದರೆ ಚಿತ್ರತಂಡ ಇದನ್ನು ಒಪ್ಪುತ್ತಿಲ್ಲಾ. ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ‘ಬರೀ’ ಸಿನಿಮಾ! ಎಂದು ಪೋಸ್ಟರ್ ಮೇಲೆ ಹಾಕಿದ್ದಾರೆ. ಜೊತೆಗೆ “ದೃಷ್ಟಿ ಬಿದ್ರೂ ಪರ್ವಾಗಿಲ್ಲಾ, ಆದ್ರೆ ವಕ್ರ ದೃಷ್ಟಿ ಬೀಳ್ದೇ ಇರಲಿ’ ಎಂದು ಮತ್ತೊಂದು ಒಕ್ಕಣೆಯನ್ನು ಹಾಕಿ ತಲೆಗೆ ಹುಳ ಬಿಟ್ಟಿದ್ದಾರೆ.
****