ಶಿವಣ್ಣನ ಒಂದೇ ಒಂದು ವಾರ್ನಿಂಗ್ಗೆ ಗಪ್ ಚುಪ್ ಆದ ಅಭಿಮಾನಿಗಳು..!

ಶಿವಣ್ಣ ಅಂದ್ರೆ ಹಾಗೆ ಅಭಿಮಾನಿಗಳೊಂದಿಗೆ ಸದಾ ಬೆರೆಯುವ, ಪ್ರೀತಿಸುವ ಗುಣ ಕೆಲವೊಮ್ಮೆ ಕೋಪ ಮಾಡಿಕೊಳ್ಳುವುದು ಉಂಟು, ಅವರ ಕೋಪಕ್ಕೆ ಅಭಿಮಾನಿಗಳೇನು ಬೇಜಾರಿಲ್ಲಾ ಆದ್ರೆ ತಕ್ಷಣ ಶಿವಣ್ಣನ ಪ್ರೀತಿಯ ಕೋಪವನ್ನ ಅರ್ಥ ಮಾಡಿಕೊಳ್ಳುತ್ತಾರೆ , ಹಾಗೆಯೆ ನಿನ್ನೆ (ಅ 26) ಇಂತಹದೊಂದು ಪ್ರಸಂಗ ಭಜರಂಗಿ 2 ಕಾರ್ಯಕ್ರಮದಲ್ಲಿ ನಡೆಯಿತು.
ಭಜರಂಗಿ 2 ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದಿಕೆಯಲ್ಲೇ ಅಭಿಮಾನಿಗಳ ಮೇಲೆ ಗರಂ ಆದ ಘಟನೆ ನಡೆದಿದೆ. ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್ ಕುಮಾರ್ ಜೊತೆ ವೇದಿಕೆ ಹಂಚಿಕೊಳ್ಳಲು ಬಂದಾಗ ಅಭಿಮಾನಿಗಳು ‘ಹೀರೋ ಹೀರೋ ಹ್ಯಾಟ್ರಿಕ್ ಹೀರೋ’ ಎಂದು ಜೈಕಾರ ಹಾಕಿದರು.
ತಕ್ಷಣವೇ ಮೈಕ್ ಕೈಗೆತ್ತಿಕೊಂಡ ಶಿವಣ್ಣ ಕೈ ಸನ್ನೆಯಲ್ಲೇ ಬೇಡ ಎನ್ನುತ್ತಾ ಗಂಭೀರವಾಗಿ ‘ಬೇಡ ಓವರ್ ಆಕ್ಟಿಂಗ್ ಎಲ್ಲಾ ಬೇಡ. ಸೈಲೆನ್ಸ್ ಇರಲಿ’ ಎಂದರು. ಶಿವಣ್ಣ ಗರಂ ಆಗಿ ಹೇಳಿದ ದಾಟಿಗೆ ಪಕ್ಕದಲ್ಲಿದ್ದ ಯಶ್, ಪುನೀತ್ ನಕ್ಕರೆ, ಜೈಕಾರ ಹಾಕುತ್ತಿದ್ದ ಫ್ಯಾನ್ಸ್ ಸುಮ್ಮನಾದರು.
****