News

ಚಿತ್ರಮಂದಿರಗಳಲ್ಲಿ ಶುದ್ದ ಕುಡಿಯುವ ನೀರು ಕೊಡುವುದು ಮಾಲೀಕರ ಜವಬ್ದಾರಿ: ಮದ್ರಾಸ್ ಹೈ ಕೋರ್ಟ್..!

ಚಿತ್ರಮಂದಿರಗಳಲ್ಲಿ ಶುದ್ದ ಕುಡಿಯುವ ನೀರು ಕೊಡುವುದು ಮಾಲೀಕರ ಜವಬ್ದಾರಿ: ಮದ್ರಾಸ್ ಹೈ ಕೋರ್ಟ್..!
  • PublishedOctober 5, 2021

ಸಿನಿಮಾ ಥಿಯೇಟರ್ ಗಳಲ್ಲಿ ಶುದ್ದ ಕುಡಿಯುವ ನೀರನ್ನು ಪ್ರೇಕ್ಷಕರಿಗೆ ಒದಗಿಸುವುದು ಚಿತ್ರಮಂದಿರದ ಮಾಲೀಕರ ಜವಬ್ದಾರಿ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 2016 ರಲ್ಲಿ ತಮಿಳುನಾಡಿನ ದೇವರಾಜನ್ ಎಂಬುವವರು ಥಿಯೇಟರ್ ಗಳಲ್ಲಿ ಕುಡಿಯುವ ನೀರು, ತಿನಿಸುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು, ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಥಿಯೇಟರ್ ನಲ್ಲಿ ನಿಗದಿ ಪಡಿಸಿ ಮಾರಾಟ  ಮಾಡಲಾಗುತ್ತಿದೆ ಎಂದು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಚಿತ್ರಮಂದಿರದ ಮಾಲೀಕರು ಪ್ರೇಕ್ಷಕರ ಭದ್ರತೆಯ ಕಾರಣವನ್ನು ನೀಡಿ, ಹೊರಗಿನಿಂದ ಕುಡಿಯುವ ನೀರು ಮತ್ತು ತಿಂಡಿ ತಿನಿಸು, ಆಹಾರ ಪದಾರ್ಥಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ವಾದಿಸಿದ್ದರು. ಇದಕ್ಕೆ ಮದ್ರಾಸ್ ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸುಬ್ರಮಣ್ಯಂ ಅವರು ತೀರ್ಪು ನೀಡಿದ್ದು ಹೊರಗಿನಿಂದ ನೀರು ತರಲು ಅವಕಾಶ ನೀಡದಿದ್ದರೆ ನೀವೇ ಉಚಿತ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.

****

Written By
Kannadapichhar

Leave a Reply

Your email address will not be published. Required fields are marked *