ನಟ ಅಮೀರ್ ಖಾನ್ ನನ್ನು ‘ಡಿವೋರ್ಸ್ ಎಕ್ಸ್ಪರ್ಟ್’ ಎಂದ ನಟಿ ಕಂಗನಾ..!

ಟಾಲಿವುಡ್ ನ ಸ್ಟಾರ್ ದಂಪತಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಭಾರೀ ಸುದ್ದಿಯಾಗುತ್ತಿದೆ. ಬಾಲಿವುಡ್ ನಟಿ ಕಂಗನಾ ರಾನಾವತ್ ತಮ್ಮ ಎಂದಿನ ಶೈಲಿಯಲ್ಲಿ ಆರೋಪಿಸಿದ್ದಾರೆ. ಇದಕ್ಕೆಲ್ಲಾ ಡಿವೋರ್ಸ್ ಎಕ್ಸ್ ಪರ್ಟ್ ಅಮೀರ್ ಖಾನ್ ಕಾರಣ ಎಂದು ಜರೆದಿದ್ದಾರೆ. ನಾಗಚೈತನ್ಯ ಅವರು ಅಮೀರ್ ಖಾನ್ ಜೊತೆ ಭೇಟಿಯಾದ ಕೂಡಲೇ ಈ ವಿಚ್ಛೇದನ ನಡೆದಿರುವಾಗ ಹೀಗೆ ಹೇಳದೆ ಮತ್ತಿನ್ನೇನು ಹೇಳಬೇಕು ಎಂದು ಟೀಕಿಸಿದ್ದಾರೆ.
ನಾಗಚೈತನ್ಯ ಅವರು ಬಾಲಿವುಡ್ ಗೆ ಕಾಲಿಟ್ಟಿದ್ದು ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. 4 ವರ್ಷಗಳ ಹಿಂದೆ ಮದುವೆಯಾದ 10 ವರ್ಷಗಳಿಂದ ಗೆಳೆತನ ಹೊಂದಿದ್ದ ಪತ್ನಿಗೆ ವಿಚ್ಛೇದನ ನೀಡುತ್ತಿರುವ ಈ ನಟ ಇತ್ತೀಚೆಗೆ ಬಾಲಿವುಡ್ ನ ಸೂಪರ್ ಸ್ಟಾರ್, ಡಿವೋರ್ಸ್ ಎಕ್ಸ್ ಪರ್ಟ್ ಅಮೀರ್ ಖಾನ್ ಜೊತೆ ಸಖ್ಯ ಹೊಂದಿದ್ದಾನೆ. ಆತ ಹಲವು ಮಹಿಳೆಯರು ಮತ್ತು ಮಕ್ಕಳ ಜೀವನವನ್ನು ಹಾಳು ಮಾಡಿದವ, ಅಂತವನ ಮಾರ್ಗದರ್ಶನದಲ್ಲಿ ಈ ನಟ ಇದ್ದಾನೆ ಎಂದ ಮೇಲೆ ವಿಚ್ಛೇದನ ಎಲ್ಲ ಸುಗಮವಾಗಿ ಸಾಗಿತು. ನಾವೇನು ಕುರುಡರಲ್ಲ, ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಮಗೆಲ್ಲಾ ಗೊತ್ತಿದೆ ಎಂದು ಕಟು ಶಬ್ದಗಳಿಂದ ಅಮೀರ್ ಖಾನ್ ರನ್ನು ಕಂಗನಾ ನಿಂದಿಸಿದ್ದಾರೆ.
ಅಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಗೆ ವಿಚ್ಛೇದನ ನೀಡಿದ ನಂತರ 2015ರಲ್ಲಿ ಬೆಂಗಳೂರು ಮೂಲದ ಕಿರಣ್ ರಾವ್ ಅವರನ್ನು ಮದುವೆಯಾಗಿ ಇತ್ತೀಚೆಗೆ ಅವರಿಗೆ ಸಹ ವಿಚ್ಛೇದನ ನೀಡಿದ್ದಾರೆ.
****