15ಕೋಟಿಗೆ ಜೇಮ್ಸ್ ಡೀಲ್ ಟಿವಿ ರೈಟ್ಸ್ ಸೋಲ್ಡೌಟ್..!!!

ಸ್ಯಾಟಲೈಟ್ ರೈಟ್ಸ್ ವಿಚಾರದಲ್ಲಿ ಕನ್ನಡ ಸಿನಿಮಾಗಳಲ್ಲೀಗ ದೊಡ್ಡ ಮಟ್ಟದ ಪೈಪೋಟಿ ನಡೀತಿದೆ. ಸ್ಯಾಂಡಲ್ವುಡ್ ನಟರ ಸಿನಿಮಾ ಪರ್ಚೇಸ್ ಮಾಡೋಕೆ ಚಾನೆಲ್‌ಗಳು.. ನಾ ಮುಂದು ತಾ ಮುಂದು ಅಂತಾ ಹೋರಾಟ ನಡೆಸುತ್ತಿದೆ. ಅದರಲ್ಲೂ ಕೆಜಿಎಫ್ ನಂತರವಂತೂ ಕನ್ನಡ ಸಿನಿಮಾಗಳಿಗೆ ಕೋಟಿ ಕೋಟಿ ಬೆಲೆ ಬಂದಿದೆ.. ಇದೀಗ ಆ ಪೈಪೋಟಿ ಎರಡಂಕಿ ದಾಟಿ ಮುಂದೆ ಹೋಗ್ತಿದೆ..
ಜೇಮ್ಸ್ ಸಿನಿಮಾಗೆ ₹ 15 ಕೋಟಿ..!
ಸ್ಯಾಂಡಲ್ವುಡ್ನಲ್ಲೀಗ ಜೇಮ್ಸ್ ಹಂಗಾಮ ಶುರುವಾಗಿದೆ.. ಬರೋಬ್ಬರಿ ₹ 15 ಕೋಟಿಗೆ ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಮಾರಾಟವಾಗ್ತಿದೆ ಅನ್ನೋ ಸುದ್ದಿಯಿದೆ..
ಖುಷಿಯ ವಿಚಾರ ಏನಂದ್ರೆ ಕನ್ನಡದ ಸಿನಿಮಾಗಳು ಎರಡಂಕಿ ದಾಟಿ ಮುನ್ನುಗುತ್ತಿವೆ. ಚಾನೆಲ್‌ಗಳು ಕನ್ನಡ ಸಿನಿಮಾಗಳ ಕಂಟೆಂಟ್, ಕ್ವಾಲಿಟಿಗೆ ತಲೆಬಾಗಿ ಕೋಟಿ ಕೋಟಿ ವ್ಯವಹಾರಕ್ಕೆ ಮುಂದಾಗ್ತಿವೆ. ಅಂದ್ಹಾಗೆ ಕನ್ನಡದಲ್ಲಿ ಯಾವ ನಟರ ಸಿನಿಮಾಗಳು ಎರಡು ಅಂಕಿದಾಟಿವೆ ಅನ್ನೋದಕ್ಕೆ ಉತ್ತರ ಇಲ್ಲಿದೆ.
ಜೇಮ್ಸ್ – ₹15 ಕೋಟಿ
ಕೆಜಿಎಫ್ ಚಾಪ್ಟರ್ 2 – ₹14 ಕೋಟಿ
ಯುವರತ್ನ – ₹12 ಕೋಟಿ
ರಾಬರ್ಟ್ – ₹ 11 ಕೋಟಿ
ಕೆಜಿಎಫ್ – ₹ 11 ಕೋಟಿ
ಯೆಸ್… ನೋಡಿದ್ರಲ್ಲ ಇದಿಷ್ಟು ಎರಡಂಕಿ ದಾಟಿದ ಸಿನಿಮಾಗಳು. ಯಶ್ ಮತ್ತು ಪುನೀತ್ ತಲಾ ಎರಡೆರಡು ಸಿನಿಮಾಗಳು ಎರಡಂಕಿ ದಾಟಿದ್ದು, ರಾಬರ್ಟ್ ಕೂಡ ಸ್ಥಾನಗಿಟ್ಟಿಸಿದೆ. ಉಳಿದಂತೆ ಕೋಟಿಗೊಬ್ಬ 3 ಸಿನಿಮಾ ₹ 9 ಕೋಟಿಗೆ ಸೋಲ್ಡೌಟ್ ಆಗಿದೆ..
****