‘ರೈಡರ್’ ಡಬ್ಬಿಂಗ್ ಮುಗಿಸಿದ ‘ಯುವರಾಜ’..

ನಿಖಿಲ್ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರೈಡರ್ ಸಿನಿಮಾದ ಡಬ್ಬಿಂಗ್ ಮುಗಿದಿದ್ದು, ಸಿನಿಮಾದ ಡಬ್ಬಿಂಗ್ ಮುಗಿದ ಬಗ್ಗೆ ವಿಶೇಷ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದ್ದು, ‘ರೈಡರ್’ ಸಿನಿಮಾದಲ್ಲಿ ನಟಿಸಿರುವ ಮುಖ್ಯ ಕಲಾವಿದರೆಲ್ಲ ವಿಡಿಯೋದಲ್ಲಿದ್ದಾರೆ. ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಹಲವು ಹಿರಿಯ ನಟರು ‘ರೈಡರ್’ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ನಟ ನಿಖಿಲ್ ಕುಮಾರಸ್ವಾಮಿ ಸಹ ‘ರೈಡರ್’ ಸಿನಿಮಾವನ್ನು ತಪ್ಪದೇ ನೋಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ‘ರೈಡರ್ ‘ ಸಿನಿಮಾದಲ್ಲಿನ ಡೈಲಾಗ್ ಒಂದು ಸಹ ವಿಡಿಯೋದಲ್ಲಿದೆ. ”ಇನ್ನೇನು ನಿಮ್ಮ ಮೇಲೆ ಕೈ ಮಾಡಿದ್ರೆ ಸುಮ್ಮನಿರ್ಬೇಕಾ” ಎಂದು ಕಾಮ್ ಆಗಿ ಆದರೆ ಖಡಕ್ ಆಗಿ ಕೇಳುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ. ಡಬ್ಬಿಂಗ್ ಅವಧಿಯ ಈ ಸಣ್ಣ ತುಣಕನ್ನು ವಿಡಿಯೋದಲ್ಲಿ ಚಿತ್ರತಂಡ ಬಿಟ್ಟುಕೊಟ್ಟಿದೆ. ಡಬ್ಬಿಂಗ್ ಮುಗಿಸಿರುವ ನಟ ನಿಖಿಲ್ ಕುಮಾರಸ್ವಾಮಿ, ”ನಮ್ಮ ‘ರೈಡರ್’ ಸಿನಿಮಾದ ಡಬ್ಬಿಂಗ್ ಇಂದು ಮುಗಿದಿದೆ. ‘ರೈಡರ್’ ಸಿನಿಮಾ ಶೀಘ್ರದಲ್ಲಿ ನಿಮ್ಮೆಲ್ಲರ ಮುಂದೆ ಬರಲಿದೆ ದಯವಿಟ್ಟು ನೀವೆಲ್ಲರೂ ಪ್ರೋತ್ಸಾಹ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ” ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.
‘ರೈಡರ್’ ಸಿನಿಮಾವನ್ನು ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾ, ‘ಗುಂಡೆಜಾರಿ ಗಲ್ಲಂತೈಯಿಂದೆ’, ‘ಒಕ ಲೈಲಾ ಕೋಸಂ’ ಹಾಗೂ ಇನ್ನೂ ಕೆಲವು ಸಿನಿಮಾಗಳನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸಿದ್ದದಾರೆ. ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ, ‘ರೈಡರ್’ ಸಿನಿಮಾವು ಆಕ್ಷನ್ ಹಾಗೂ ಪ್ರೇಮ ಕತೆಯನ್ನು ಹೊಂದಿದ್ದು ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ.
****