News

ಶಾರುಖ್ ಖಾನ್ ಸಿನಿಮಾ ನೋಡಿದ ಮಹಿಳೆಗೆ ಸಿಕ್ತು 15 ಸಾವಿರ ಹಣ..!

ಶಾರುಖ್ ಖಾನ್ ಸಿನಿಮಾ ನೋಡಿದ ಮಹಿಳೆಗೆ ಸಿಕ್ತು 15 ಸಾವಿರ ಹಣ..!
  • PublishedSeptember 21, 2021

ಶಾರೂಖ್ ಖಾನ್ ಸಿನಿಮಾ ನೋಡಿದ ಮಹಿಳೆಗೆ 15 ಸಾವಿರ ಹಣ ಹೇಗೆ ಸಿಕ್ತು ಅಂತ ಯೋಚಿಸುತ್ತಿದ್ದೀರಾ..! ಮುಂದೆ ಸುದ್ದಿ ಓದಿ.ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಿನಿಮಾದ ಟ್ರೈಲರ್‍ ನಂಬಿ ಸಿನಿಮಾ ನೋಡಿ ಮೋಸ ಹೋಗಿದ್ದ ಪ್ರೇಕ್ಷಕರೊಬ್ಬರಿಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಕ್ಕಿದ್ದು, 15 ಸಾವಿರ ರೂ.ಪರಿಹಾರ ಕೂಡ ಸಿಗುತ್ತಿದೆ.

2017 ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಅಭಿಯನದ ಜಬ್ರಾ ಫ್ಯಾನ್ ಸಿನಿಮಾ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿತ್ತು. ಚಿತ್ರ ಬಿಡುಗಡೆಯ ಮುನ್ನ ಟೈಟಲ್ ಸಾಂಗ್ ಸಾಕಷ್ಟು ಮೆಚ್ಚುಗೆ ಪಡೆದುದಿತ್ತು.ಈ ಹಾಡಿನಿಂದ ಮೋಡಿಯಾದ ಮಹಾರಾಷ್ಟ್ರದ ಶಾರೂಖ್ ಖಾನ್ ಅಭಿಮಾನಿ ಅಫ್ರೀನ್ ಫಾತೀಮಾ ಎಂಬ ಶಿಕ್ಷಕಿ, ತಮ್ಮ ಮಕ್ಕಳನ್ನು ಕರೆದುಕೊಂಡು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದರು. ಆದರೆ, ಸಿನಿಮಾದಲ್ಲಿ ಆ ಗೀತೆಯನ್ನು ತೆಗೆದು ಹಾಕಲಾಗಿತ್ತು. ಇದು ಫಾತೀಮಾ ಅವರಿಗೆ ನಿರಾಸೆಯ ಜೊತೆ ಕೋಪಕ್ಕೆ ಕಾರಣವಾಯಿತು.

ಹೀಗೆ ಮೋಸ ಮಾಡಿದ ಚಿತ್ರತಂಡದ ವಿರುದ್ಧ ಫಾತೀಮಾ ಅವರು ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ಸಿನಿಮಾ ನಿರ್ಮಾಣ ಮಾಡಿದ್ದ ಯಶ್ ರಾಜ್ ಫಿಲಂಸ್ಗೆ 10 ಸಾವಿರ ಹಾಗೂ ಫಾತೀಮಾ ಸಿನಿಮಾ ನೋಡಲು ಖರ್ಚು ಮಾಡಿದ್ದ 5 ಸಾವಿರವನ್ನು ಸೇರಿಸಿ ಒಟ್ಟಾರೆ 15 ಸಾವಿರ ನೀಡಬೇಕು ಅಂತ ಗ್ರಾಹಕರ ವೇದಿಕೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಟ್ರೈಲರ್‍ ನಲ್ಲಿ ಒಂದು ತೋರಿಸಿ, ಸಿನಿಮಾದಲ್ಲಿ ಅದನ್ನು ತೋರಿಸದೆ ಇದ್ದ ಕಾರಣಕ್ಕೆ ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ. ದೂರು ದಾಖಲಿಸಿದ ಫಾತೀಮಾಗೆ 15 ಸಾವಿರ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.

****

Written By
Kannadapichhar

Leave a Reply

Your email address will not be published. Required fields are marked *