News

CSK – ಮುಂಬೈ ಪಂದ್ಯ ವೀಕ್ಷಿಸಿದ ಕಿಚ್ಚ ದಂಪತಿ

CSK – ಮುಂಬೈ ಪಂದ್ಯ ವೀಕ್ಷಿಸಿದ ಕಿಚ್ಚ ದಂಪತಿ
  • PublishedSeptember 20, 2021

ಸೆಪ್ಟೆಂಬರ್ 19ರ ಭಾನುವಾರದಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಕನ್ನಡದ ಖ್ಯಾತ ಚಲನಚಿತ್ರ ನಟ ಕಿಚ್ಚ ಸುದೀಪ್ ಆಗಮಿಸಿದ್ದರು. ಹೌದು, ಇತ್ತೀಚೆಗಷ್ಟೇ ಐಪಿಎಲ್ ವೀಕ್ಷಿಸಲು ಕಿಚ್ಚ ಸುದೀಪ್ ದುಬೈ ಪ್ರಯಾಣವನ್ನು ಕೈಗೊಂಡಿದ್ದ ಸುದ್ದಿ ವೈರಲ್ ಆಗಿತ್ತು ಹಾಗೂ ದುಬೈಗೆ ಬಂದಿಳಿದ ಕಿಚ್ಚ ಸುದೀಪ್ ಅವರಿಗೆ ಆದರದ ಸ್ವಾಗತವನ್ನು ಕೋರಿದ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಇದೀಗ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯವನ್ನು ಮೈದಾನಕ್ಕೆ ಆಗಮಿಸಿ ವೀಕ್ಷಿಸಿದ್ದು, ಕಿಚ್ಚ ಸುದೀಪ್ ಪಂದ್ಯವನ್ನು ವೀಕ್ಷಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.




****

Written By
Kannadapichhar

Leave a Reply

Your email address will not be published. Required fields are marked *