News

ರಿಯಲ್ ಸ್ಟಾರ್ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳು..!

ರಿಯಲ್ ಸ್ಟಾರ್ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳು..!
  • PublishedSeptember 18, 2021

ರಿಯಲ್ ಸ್ಟಾರ್ ಉಪೇಂದ್ರ 53 ನೇ ಜನುಮ ದಿನದ ಸಂಭ್ರಮವನ್ನು ತಮ್ಮ ಆಪ್ತರು ಮತ್ತು ಕುಟುಂಬದವರೊಡನೆ ಆಚರಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಗಿಫ್ಟ್ ಗಳ ರೂಪದಲ್ಲಿ ಹೊಸ ಸಿನಿಮಾ ಅನೌನ್ಸ್ ಆಗುತ್ತಿವೆ. ಐ ಲವ್ ಯೂ ಸಿನಿಮಾ ಟೈಂನಲ್ಲಿ ಸಿನಿಮಾದಿಂದ ದೂರ ಉಳಿದು. ಕಂಪ್ಲೀಟ್ ಪ್ರಜಾಕೀಯದಲ್ಲಿ ಬ್ಯುಸಿಯಾಗೋದಾಗಿ ತಿಳಿಸಿದ್ರು.. ಆದ್ರೆ ಅಭಿಮಾನಿಗಳ ಆಸೆಯಂತೆ ಉಪ್ಪಿ ಮತ್ತೊಮ್ಮೆ ದೊಡ್ಡ ಪರದೆಯತ್ತ ಮುಖ ಮಾಡಿದ್ದಾರೆ‌‌.. ಇದಕ್ಕೆ ಸಾಕ್ಷಿ ಇವತ್ತು ಅನೌನ್ಸ್ ಆಗಿರೋ ಉಪ್ಪಿ ಸಿನಿಮಾಗಳ ಲಿಸ್ಟ್…

ಸದ್ಯ ಉಪೇಂದ್ರ ಏಕಕಾಲಕ್ಕೆ ಕನ್ನಡ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಅಲ್ಲು ಅರ್ಜುನ್ ನಿರ್ಮಾಣ ಸಂಸ್ಥೆಯ “ಬಾಕ್ಸರ್ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ “ಹೋಮ್ ಮಿನಿಸ್ಟ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಈಗಾಗಲೇ ಸೆನ್ಸಾರ್ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಹೋಮ್ ಮಿನಿಸ್ಟರ್’ ಥಿಯೇಟರ್ಗಳು ತೆರೆಯುತ್ತಿದ್ದಂತೆ, ಬಿಡುಗಡೆಯಾಗಲಿದೆ.

ಉಪೇಂದ್ರ ಅಭಿನಯದ “ಕಬ್ಜ’ ಚಿತ್ರ ಕೂಡ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಒಂದಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಬಾಕಿಯಿರುವ ಚಿತ್ರೀಕರಣ ಸೆಪ್ಟೆಂಬರ್ನಿಂದ ಶುರುವಾಗಲಿದೆ. ಇದರೊಂದಿಗೆ ರವಿಚಂದ್ರನ್ ಅವರೊಂದಿಗೆ ನಟಿಸುತ್ತಿರುವ ಸಿನಿಮಾವೂ ಸಿದ್ಧವಾಗಿದೆ. ಇದಲ್ಲದೇ ಮಾದೇಶ ಜೊತೆ “ಲಗಾಮ್’ ನಡೆಯುತ್ತಿದೆ. ಇನ್ನು ಶಶಾಂಕ್ ಚಿತ್ರಗಳಿಗೂ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

“ಲಗಾಮ್ ಮಾದೇಶ ನಿರ್ದೇಶನದ “ಲಗಾಮ್” ಚಿತ್ರದಲ್ಲೂ ಉಪ್ಪಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಮ್ಯಾನರೀಸಂ, ಗೆಟಪ್ ಎಲ್ಲವೂ ವಿಭಿನ್ನವಾಗಿದೆಯಂತೆ. ಈ ಬಗ್ಗೆ ಮಾತನಾಡುವ ಉಪೇಂದ್ರ, “ಇತ್ತೀಚಿನ ವರ್ಷಗಳಲ್ಲಿ ನಾನು ಮಾಡಿದ ಸಿನಿಮಾಗಳಿಗಿಂತ ತುಂಬ ವಿಭಿನ್ನವಾದ ಸಿನಿಮಾ ಇದು. ನಮ್ಮ ನಡುವೆಯೇ ನಡೆಯುವ ಕೆಲವೊಂದು ಅಂಶಗಳು ಈ ಸಿನಿಮಾದಲ್ಲಿದೆ. ಹಾಗಂತ ಇಲ್ಲಿ ರಾಜಕೀಯ ಇಲ್ಲ. ಸಿನಿಮಾದ ಕಥೆ ತುಂಬ ಚೆನ್ನಾಗಿದೆ. ಆಡಿಯನ್ಸ್ಗೂ ಸಿನಿಮಾ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ಎಂಟರ್ಟೈನ್ಮೆಂಟ್ಗೆ ಬೇಕಾದ ಎಲ್ಲ ಅಂಶಗಳನ್ನೂ “ಲಗಾಮ್ “ನಲ್ಲಿ ನೋಡಬಹುದು. ಆದಷ್ಟು ಬೇಗ ಸಿನಿಮಾ ಮುಗಿಸಿ ಥಿಯೇಟರ್ಗೆ ಬರೋದಕ್ಕೆ ನಾವು ಕಾತುರರಾಗಿದ್ದೇವೆ. ಈ ಸಿನಿಮಾವನ್ನು ಬಹಳ ದೊಡ್ಡದಾಗಿ ಮಾಡುತ್ತಿದ್ದಾರೆ. ವಿಡಂಬನೆ, ಭ್ರಷ್ಟಾಚಾರ ಸೇರಿದಂತೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಅದರ ಬಗ್ಗೆ ನಾನು ಹೆಚ್ಚಿಗೆ ಹೇಳಲಾಗುವುದಿಲ್ಲ. ನಿರ್ದೇಶಕರು ಏನು ಹೇಳಿದ್ದಾರೋ ಅದೇ ಫೈನಲ್. ಸಿನಿಮಾ ದಲ್ಲಿಯೇ ಎಲ್ಲವನ್ನೂ ನೋಡಬೇಕು ಎಂಬುದು ನನ್ನಾಸೆ. ಒಂದಷ್ಟು ಸಾಮಾಜಿಕ ವಿಡಂಬನೆ ಈ ಸಿನಿಮಾದಲ್ಲೂ ಇರುತ್ತದೆ . ಎನ್ನುತ್ತಾರೆ. 

ಈ ನಡುವೆಯೇ”ಬುದ್ಧಿವಂತ-2 & prime; ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸುತ್ತಿದ್ದು, ಜಯರಾಮ್ ನಿರ್ದೇಶನ ಮಾಡುತ್ತಿದ್ದಾರೆ.
“ಯಮರಾಜ” ನಾದ ಉಪೇಂದ್ರ: ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಎರಡು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಅದರಲ್ಲೊಂದು “ಯಮರಾಜ. ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ಆರ್.ಕೇಶವ್ ಈ ಚಿತ್ರದ ನಿರ್ಮಾಪಕರು. ಕೆ.ಮಂಜು ಅವರ ಸಹಕಾರ ಈ ಚಿತ್ರಕ್ಕಿದೆ.

****


Written By
Kannadapichhar

Leave a Reply

Your email address will not be published. Required fields are marked *