News

ಸೌಂದರ್ಯ ಬಯೋಪಿಕ್ ಸಲ್ಲಿ ರಶ್ಮಿಕಾ ಮಂದಣ್ಣ..!

ಸೌಂದರ್ಯ ಬಯೋಪಿಕ್ ಸಲ್ಲಿ ರಶ್ಮಿಕಾ ಮಂದಣ್ಣ..!
  • PublishedSeptember 17, 2021
ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗಲ್ಲೂ ಹೆಸರು ಮಾಡಲು ಮುಂದಾಗಿದ್ದಾರೆ.ರಶ್ಮಿಕಾ ಗೆ  ಬಾಲಿವುಡ್ ನಿಂದಲೂ ಬಿಗ್ ಆಫರ್ಗಳು ಬರಲಾರಂಭಿಸಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ರಶ್ಮಿಕಾ ಬಯೋಪಿಕ್ ಮಾಡಲು ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದರು!

ಇತ್ತೀಚೆಗೆ ಬಾಲಿವುಡ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ, ರಶ್ಮಿಕಾ ಅವರು ನಟಿ ಸೌಂದರ್ಯ ಅವರ ಜೀವನಚರಿತ್ರೆ ಮಾಡಲು ಬಯಸುವುದಾಗಿ ಬಹಿರಂಗಪಡಿಸಿದರು. ಸೌಂದರ್ಯ ತನ್ನ ಸಾರ್ವಕಾಲಿಕ ನೆಚ್ಚಿನ ನಟಿ ಎಂದು ಅವರು ಉಲ್ಲೇಖಿಸಿದ್ದಾರೆ. ಅದಕ್ಕೆ ಒಂದು ಕುತೂಹಲಕಾರಿ ಪ್ರಸಂಗವನ್ನು ಕೂಡ ಸೇರಿಸಿದರು.

"ನಾನು ಉದ್ಯಮಕ್ಕೆ ಬರುವ ಮೊದಲು, ನನ್ನ ತಂದೆ ನಾನು ನಟಿ ಸೌಂದರ್ಯವನ್ನು ಹೋಲುತ್ತೇನೆ ಎಂದು ಯಾವಾಗಲೂ ಹೇಳುತ್ತಿದ್ದರು. ಸೌಂದರ್ಯ ಅವರು ಮಾಡಿರುವ ಪ್ರತಿ ಪಾತ್ರಗಳು ನನಗೆ ಇಷ್ಟವಾಗಿದೆ ಮತ್ತು ನಾನು ಅವರ ಜೀವನಚರಿತ್ರೆಯನ್ನು ಮಾಡಲು ಬಯಸುತ್ತೇನೆ "ಎಂದು ರಶ್ಮಿಕಾ ಹೇಳಿದರು. ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್‌ಗಳು ಇತ್ತೀಚಿನ ಟ್ರೆಂಡ್ ಆಗುತ್ತಿರುವುದನ್ನು ನಾವು ಗಮನಿಸಬಹುದು.
ಕನ್ನಡದಲ್ಲಿ ಕಿರಿಕ್ ಪಾರ್ಟಿ ಮೂಲಕ ಪಾದಾರ್ಪಣೆ ಮಾಡಿದ ರಶ್ಮಿಕಾ ಟಾಲಿವುಡ್‌ನಲ್ಲಿ ಖ್ಯಾತಿ ಪಡೆದರು. ಬ್ಯಾಕ್-ಟು-ಬ್ಯಾಕ್ ಹಿಟ್‌ಗಳೊಂದಿಗೆ, ರಶ್ಮಿಕಾ ಕಡಿಮೆ ಸಮಯದಲ್ಲಿ ಸ್ಟಾರ್‌ಡಮ್ ಅನ್ನು ಸಾಧಿಸಿದರು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಸ್ಫೂರ್ತಿ ಎಂದು ರಶ್ಮಿಕಾ ತಿಳಿಸಿದ್ದಾರೆ. ರಶ್ಮಿಕಾ 'ಮಿಷನ್ ಮಜ್ನು' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

****
Written By
Kannadapichhar

Leave a Reply

Your email address will not be published. Required fields are marked *