News

ಮೈಸೂರಿನ ಬಡ ಕುಟುಂಬಕ್ಕೆ ಬಿಗ್ ಗಿಫ್ಟ್ ಕೊಟ್ಟ ನಟ ಪ್ರಕಾಶ್ ರಾಜ್

ಮೈಸೂರಿನ ಬಡ ಕುಟುಂಬಕ್ಕೆ ಬಿಗ್ ಗಿಫ್ಟ್ ಕೊಟ್ಟ ನಟ ಪ್ರಕಾಶ್ ರಾಜ್
  • PublishedSeptember 15, 2021

ದಕ್ಷಿಣ ಭಾರತದ ಅತ್ಯುತ್ತಮ ನಟ ಪ್ರಕಾಶ್ ರಾಜ್ ಒಂದಿಲ್ಲೊಂದು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಕೊರೊನ ಲಾಕ್ ಡೌನ್ ಸಮಯದಲ್ಲಿ ಬಡ ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಿಕೊಡುವ ಮೂಲಕ ಬಡವರ ಪರ ಕಾಳಜಿ ಮೆರದಿದ್ದ ಪ್ರಕಾಶ್ ರಾಜ್, ಸದಾ ಸಾಮಾಜಿಕ ಸೇವೆಗಳಲ್ಲಿ ಒಂದು ಕೈ ಮುಂದೆಯೇ ಇರುತ್ತದೆ.


ಶ್ರೀರಂಗಪಟ್ಟಣದ ಬಡ ಕುಟುಂಬಕ್ಕೆ ಜೆಸಿಬಿಯನ್ನು ಹಸ್ತಾಂತರಿಸುತ್ತಿರುವ ಪ್ರಕಾಶ ರಾಜ್

ಈಗ ಮತ್ತೆ ಮೈಸೂರಿನ ಬಡ ಕುಟುಂಬವೊಂದಕ್ಕೆ ಹೊಸ ಜೆಸಿಬಿ ವಾಹವನ್ನು ಪ್ರಕಾಶ್ ರೈ ಉಚಿತವಾಗಿ ನೀಡಿದ್ದಾರೆ. ಜೆಸಿಬಿ ವಾಹವನ್ನು ಬಳಸಿ ದುಡಿದು ಜೀವನ ನಡೆಸಲು ದಾರಿಯೊಂದನ್ನು ಪ್ರಕಾಶ್ ರೈ ಮಾಡಿಕೊಟ್ಟಿದ್ದಾರೆ. ಮೈಸೂರಿನ, ಶ್ರೀರಂಗಪಟ್ಟಣದ ಬಡ ಕುಟುಂಬಕ್ಕೆ ಜೆಸಿಬಿ ನೀಡಿದ್ದಾರೆ. ಜೆಸಿಬಿ ಹಸ್ತಾಂತರ ಮಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಪ್ರಕಾಶ್ ರೈ. ”ಜೆಸಿಬಿ ನೀಡುವ ಮೂಲಕ ಕುಟುಂಬವನ್ನು ಆರ್ಥಿಕವಾಗಿ ಸಬಲ ಮಾಡುವ ಯತ್ನ. ಮೈಸೂರಿನ, ಶ್ರೀರಂಗಪಟ್ಟಣದ ಬಳಿಕ ಕುಟುಂಬಕ್ಕೆ ಜೆಸಿಬಿಯನ್ನು ಪ್ರಕಾಶ್‌ರಾಜ್ ಫೌಂಡೇಶನ್ ಮೂಲಕ ನೀಡಲಾಯಿತು. ಗಳಿಸಿದ್ದನ್ನು ಮರಳಿ ನೀಡುವ ಖುಷಿ” ಎಂದಿದ್ದಾರೆ ಪ್ರಕಾಶ್ ರೈ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಸ್ತುತ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯೂಸಿ ಇರುವ ಪ್ರಕಾಶ ರೈ ತೆಲುಗು ಸಿನಿಮಾ ರಂಗದ ಪ್ರತಿಷ್ಠಿತ ಎಂಎಎ(ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *