ಇಂಡಿಯನ್ ಬೆಸ್ಟ್ ಸ್ಟಂಟ್ ಮಾಸ್ಟರ್ಸ್ ರಾಮ್ ಲಕ್ಷ್ಮಣ್ ರಿಂದ ಸಲಗ ಚಿತ್ರಕ್ಕೆ ಶುಭಹಾರೈಕೆ

ಸಲಗ ಬಿಡುಗಡೆಗೂ ಮುನ್ನವೇ ಅಭರ ಜೋರಾಗಿದೆ, ಮತ್ತೆ ಪ್ರಮೋಷನಲ್ ಸಾಂಗ್ ಟಿಣಿಂಗಾ.. ಮಿಣಿಂಗಾ.. ಟಿಶ್ಯಾ ತನ್ನ ಹವಾ ಮುಂದು ವರೆಸಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸೆಟ್ಟಲ್ಲಿ ನಿರ್ದೇಶಕ ಚೇತನ್ ಕುಮಾರ್ ಜೊತೆಗೆ ಇಂಡಿಯನ್ ಬೆಸ್ಟ್ ಸ್ಟಂಟ್ ಮಾಸ್ಟರ್ಸ್ ರಾಮ್ ಲಕ್ಷ್ಮಣ್ ಸಲಗ ಪ್ರೊಮೋಷನಲ್ ಸಾಂಗ್ ಟಿಣಿಂಗಾ ಮಣಿಂಗಾ ಹಾಡನ್ನ ನೋಡಿ ಸಂಭ್ರಮಿಸಿದ್ದಾರೆ.ಅಲ್ಲದೆ ಆಕ್ಷನ್ ಹೀರೋ ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನ ಹಾಗೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವ್ರಿಗೆ ವಿಶೇಷವಾಗಿ ಅಭಿನಂದಿಸಿದ್ದಾರೆ.

ಸಲಗ ಬಿಡುಗಡೆಗೂ ಮುನ್ನವೇ ಒಂದಿಲ್ಲೊಂದು ಸೆನ್ಸೇಷನ್ ಕ್ರಿಯೇಟ್ ಮಾಡ್ತಾನೆ ಬಂದಿದೆ. ಚಿತ್ರದ ಬಿಡುಗಡೆ ಆಗಸ್ಟ್ 20 ಎಂದು ಅಂದಾಜು ಮಾಡಿಕೊಂಡಿದ್ದ ಚಿತ್ರ ತಂಡ ಕೊರೊನಾ ಗೈಡ್ ಲೈನ್ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ಮುಂದೂಡಿತು, ಆದರೆ ಈಗಾಗಲೆ ರಿಲೀಸ್ ಆಗಿರುವ ಚಿತ್ರದ ಹಾಡುಗಳು ಸಕತ್ ಸೌಂಡು ಮಾಡ್ತಿವೆ, ಇತ್ತೀಚೆಗೆ ರಿಲೀಸ್ ಆದ ಪ್ರಮೋಷನ್ ಸಾಂಗ್ 30 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದ್ದು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದೆ. ಹಾಡನ್ನು ಕೇಳಿದ ಎಲ್ಲರು ಹಾಡನ್ನು ಮೆಚ್ಚಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಜೊತೆಗೆ ಸ್ಟಂಟ್ ಮಾಸ್ಟರ್ಸ್ ರಾಮ್ ಲಕ್ಷ್ಮಣ್ ಹಾಡನ್ನು ವೀಕ್ಷಿಸುತ್ತಿರುವುದು

ಈ ಹಾಡನ್ನು ದುನಿಯಾ ವಿಜಿ ಅವರು ಸಿದ್ದಿ ಸಮುದಾಯದ ಗಿರಿಜಾ ಸಿದ್ದಿ ಮತ್ತು ಗೀತಾ ಸಿದ್ದಿ ಅವರಿಂದ ಹಾಡಿಸಿರುವುದು ಮತ್ತೊಂದು ವಿಶೇಷ .
****