‘ಬಿಗ್ ಬಾಸ್’ ಬಂದ್.. ಬಂದ್… ಬಂದ್..!

ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮನೆ ಮನದ ಮಾತಾಗಿದೆ… ಕಳೆದ ಏಳು ಸೀಸನ್ಗಳಲ್ಲೂ ಯಶಸ್ವಿ ಕಿರೀಟವನ್ನು ಮುದಿಗೇರಿಸಿಕೊಂಡಿದೆ.. ಇದೇ ಉತ್ಸಾಹದಲ್ಲಿ ಎಂಟನೇ ಆವೃತ್ತಿಯೂ ಆರಂಭ ಆಗಿತ್ತು.. ಆದ್ರೆ ಆ ವೇಗಕ್ಕೀಗ ಕೊರೊನಾ ಬ್ರೇಕ್ ಹಾಕಿದೆ..

ಸುದೀಪ್ ಅನಾರೋಗ್ಯದ ಕಾರಣದಿಂದ ಮೂರು ವಾರ ವೀಕೆಂಡ್ ಕಾಣಿಸಿಕೊಂಡಿರಲಿಲ್ಲ.. ಆದ್ರೂ ಈ ಲಾಕ್ ಡೌನ್ ಮಧ್ಯೆಯೂ ಕನ್ನಡಿಗರ ಮನರಂಜನೆಗೆ ಕಾರಣ ಆಗಿದ್ದು… ಇದೇ ಬಿಗ್ ಬಾಸ್.. ಆದ್ರೆ ಅದ್ಯಾವಾಗ ಐಪಿಎಲ್ ಅರ್ಧಕ್ಕೆ ಸ್ಟಾಪ್ ಆಯ್ತೋ.. ಅಲ್ಲಿಂದ ಎಲ್ಲರ ಕಣ್ಣು ಬಿಗ್ ಬಾಸ್ ಮೇಲೂ ಬಿದ್ದಿತ್ತು.. ಇದೆಲ್ಲದರ ಪರಿಣಾಮವಾಗಿ ಬಿಗ್ ಬಾಸ್ ಸೀಸನ್ 8 ರ ಓಟ ಅರ್ಧಕ್ಕೆ ನಿಂತಿದೆ.. ಇದನ್ನು ಅಫಿಶಿಯಲ್ಲಾಗಿ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮತ್ತು ಕಿಚ್ಚ ಸುದೀಪ್ ತಿಳಿಸಿದ್ದಾರೆ..
ಬಿಗ್ ಬಾಸ್ ಇವತ್ತಿಗೆ 71ನೇ ದಿನ ಪೂರೈಸಿತ್ತು… ಇನ್ನು ನಾಲ್ಕು ವಾರ ಕಳೆದೋಗಿದ್ರೆ.. ಈ ಸೀಸನ್ ಕಂಪ್ಲೀಟ್ ಆಗಿತ್ತು.. ಆದ್ರೆ ಒಳಗಿರೋ ಕಂಟಸ್ಟಂಟ್ಗಳ ಆರೋಗ್ಯದ ಮೇಲಿನ ಕಾಳಜಿಯಿಂದ ಹಾಗೂ ಸರ್ಕಾರದ ನಿಯಮವನ್ನು ಗೌರವಿಸಿ ಶೋ ಸ್ಟಾಪ್ ಮಾಡಿದೆ.. ಈ ಬಗ್ಗೆ ಪರಮೇಶ್ವರ ಗುಂಡ್ಕಲ್ ಭಾರವಾದ ಮನಸ್ಸಿನಿಂದ ಸಾಮಾಜಿಕ ಜಾಲತಾಣದಿಂದ ಬಿಗ್ ಬಾಸ್ಗೆ ಬ್ರೇಕ್ ಕೊಟ್ಟಿರೋದನ್ನು ತಿಳಿಸಿದ್ದಾರೆ.. ‘ಕಂಟಸ್ಟಂಟ್ಗಳು ಸದ್ಯ ಐಸೋಲೇಷನ್ನಿನಲ್ಲಿ ಸುರಕ್ಷಿತವಾಗಿದ್ದು.. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ’ ಎಂದು ತಿಳಿಸಿದ್ದಾರೆ.