new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

6 ಭಾಷೆಯಲ್ಲಿ ಯಶೇ ಡಬ್ಬಿಂಗ್..! 90% ರೆಡಿ ಮಾರ್ಚಿಗೆ ಪಕ್ಕಾ ರೆಡಿ

6 ಭಾಷೆಯಲ್ಲಿ ಯಶೇ ಡಬ್ಬಿಂಗ್..! 90% ರೆಡಿ ಮಾರ್ಚಿಗೆ ಪಕ್ಕಾ ರೆಡಿ
  • PublishedDecember 9, 2025

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ 2026 ರ ಮಾರ್ಚ್ 19 ರಂದು ತೆರೆಯ ಮೇಲೆ ಬರಲು ತಯಾರಾಗುತ್ತಿದೆ. ಚಿತ್ರದ ಚಿತ್ರೀಕರಣವು ಬಿರುಸಾಗಿ ನಡೆಯುತ್ತಿದೆ. ಇದೀಗ ಚಿತ್ರೀಕರಣದ ವಿಷಯವಾಗಿ ದೊಡ್ಡ ಅಪ್ಡೇಟ್ ಒಂದು ಬಂದಿದೆ.ಅದೇನಪ್ಪ ಹೊಸ ಅಪ್ಡೇಟ್ ಎಂದು ತಿಳಿಯಬೇಕಾದರೆ ಈ ಸ್ಟೋರಿ ನ ಸಂಪೂರ್ಣವಾಗಿ ಓದಿ.

ಹೌದು, ಇದೀಗ ಸಿನಿಮಾಗೆ 100 ದಿನದ ಕೌಂಟ್ಡೌನ್ ಶುರುವಾಗಿದ್ದು, ಸದ್ಯಕ್ಕೆ ಮತ್ತೊಂದು ದೊಡ್ಡ ಮಾಹಿತಿ ಸಿಕ್ಕಿದೆ. ಅದುವೇ ಟಾಕ್ಸಿಕ್ ಚಿತ್ರತಂಡವು 90% ಶೂಟಿಂಗ್ ಅನ್ನು ಮುಗಿಸಿದೆ ಎಂದು.ಈ ವರ್ಷ ಸಕ್ಕತ್ ಬ್ಯುಸಿ ಆಗಿ ಇದ್ದ ಯಶ್ ಎರಡು ದೊಡ್ಡ ಸಿನಿಮಾಗಳ ಕೆಲ್ಸದಲ್ಲಿ ಬ್ಯುಸಿ ಇದ್ದರು. ಟಾಕ್ಸಿಕ್ ಜೊತೆ ಜೊತೆಗೆ ರಾಮಾಯಣ ಚಿತ್ರದಲ್ಲಿ ರಾವಣನಾಗಿ ಮಿಂಚಲಿರುವ ರಾಕಿ ಭಾಯ್ ರಾಮಾಯಣ ಚಿತ್ರದ ಶೂಟಿಂಗ್ ನಂತರ ಟಾಕ್ಸಿಕ್ ಚಿತ್ರದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.

ಬೆಂಗಳೂರಿನ ಪೀಣ್ಯದಲ್ಲಿರುವ ಎಚ್ಎಂಟಿ ಗೆ ಸೇರಿದ ಜಾಗದಲ್ಲಿ ಶೂಟಿಂಗ್ ಸೆಟ್ ಹಾಕಿದ್ದು, ಈ ಹಿಂದೆ ಆ ಪ್ರದೇಶದಲ್ಲಿ ಶೂಟಿಂಗ್ ಗಾಗಿ ನೂರಾರು ಮರಗಳನ್ನು ಚಿತ್ರ ತಂಡ ಕಡೆಸಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಾಂಡ್ರೆ ಆರೋಪ ಮಾಡಿದ್ದರು. ಹಾಗಾಗಿ ಎಫ್ ಫೈರ್ ಕೂಡ ಆಗಿತ್ತು. ಈ ವಿಚಾರವಾಗಿ ಅರಣ್ಯ ಇಲಾಖೆ ಡಿಸೆಂಬರ್ 28 ರೊಳಗೆ ಚಿತ್ರೀಕರಣ ಮುಗಿಸಬೇಕು ಎಂದು ಹೇಳಿದ್ದರು. ಹಾಗಾಗಿ ಟಾಕ್ಸಿಕ್ ಚಿತ್ರೀಕರಣ ಬರದಿಂದ ಸಾಗುತ್ತಿದೆ ಎಂಬ ಮಾಹಿತಿ ದೊರಕಿದೆ.

ಇನ್ನು ಚಿತ್ರವು ಕನ್ನಡ, ತೆಲುಗು, ತಮಿಳ್, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಆರು ಭಾಷೆಗಳಲ್ಲಿ ಬರಲಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿದೆ.ವಿಶೇಷ ಎಂದರೆ ಈ ಬಾರಿ ಯಶ್ ಅವರು ಸ್ವತಃ ಆರು ಭಾಷೆಗಳಿಗೆ ಡಬ್ಬಿಂಗ್ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ.

Written By
Kannada Picchar

Leave a Reply

Your email address will not be published. Required fields are marked *