60 ಪ್ರಶಸ್ತಿಗಳನ್ನು ಗೆದ್ದ ‘ರುದ್ರಿ’ಖುಷಿ ಹಂಚಿಕೊಂಡ ಪಾವನಾಗೌಡ

ಪಾವನಾಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ರುದ್ರಿ’ ಸಿನಿಮಾ 60 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವುದು ಇಡೀ ಚಿತ್ರ ತಂಡಕ್ಕೆ ಖುಷಿ ಕೊಟ್ಟಿದೆ. ಕಳೆದ ವರ್ಷ ಇಟಲಿಯಲ್ಲಿ ನಡೆದ ಓನಿರೋಸ್ ಚಿತ್ರೋತ್ಸವದಲ್ಲಿ ‘ರುದ್ರಿ’ ಚಿತ್ರದ ಅಭಿನಯಕ್ಕಾಗಿ ಪಾವನಾಗೌಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಹಾಗೆಯೇ ಚಿತ್ರ ಬೇರೆ ಬೇರೆ ವಿಭಾಗದ ಪ್ರಶಸ್ತಿಗಳನ್ನು ಗೆದ್ದಿತ್ತು.
ಕನ್ನಡ ಪಿಚ್ಚರ್ ಜೊತೆ ಮಾತನಾಡಿದ ನಟಿ ಪಾವನಾಗೌಡ ರುದ್ರಿ ಚಿತ್ರದ ತಮ್ಮ ಪಾತ್ರ ಮತ್ತು ಚಿತ್ರಕ್ಕೆ ಸಿಕ್ಕ ಮನ್ನಣೆ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ರುದ್ರಿ ಚಿತ್ರ 55 ರಿಂದ 60 ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿ 60 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವುದರ ಜೊತೆಗೆ ಪಾವನಾಗೌಡ ಅವರ ನಟನೆಗೆ 8 ಅತ್ಯುತ್ತಮ ನಟಿ ಪ್ರಶಸ್ತಿ ಬಂದಿರುವುದು ಸಕತ್ ಖುಷಿ ನೀಡಿದಿಯಂತೆ.

ನಾನು ಇಲ್ಲಿವರೆಗೆ ಅಭಿನಯಿಸಿರುವ ಎಲ್ಲ ಪಾತ್ರಗಳೂ ನನಗೆ ಇಷ್ಟ ಆದರೆ ರುದ್ರಿ ನನ್ನ ಪಾಲಿಗೆ ಕೇವಲ ಒಂದು ಸಿನಿಮಾ ಅಥವಾ ಪಾತ್ರವಾಗಿರಲಿಲ್ಲ. ಇಡೀ ಸ್ತ್ರೀ ಸಂಕುಲದ ಧ್ವನಿಯೇ ಈ ಕಥೆಯಲ್ಲಿತ್ತು. ನನಗೆ ಎಲ್ಲ ರೀತಿಯಲ್ಲಿಯೂ ಇದು ಸವಾಲೊಡ್ಡುವಂತಹ ಪಾತ್ರವಾಗಿತ್ತು. ಆದರೆ ಈಗ ಅದಕ್ಕೆ ಸಿಗುತ್ತಿರುವ ಮನ್ನಣೆ ನೋಡಿದಾಗ ಪಾತ್ರಕ್ಕೆ ನ್ಯಾಯ ಒದಗಿಸಿದ ತೃಪ್ತಿ ನನ್ನಲ್ಲು ಮೂಡುತ್ತಿದೆ. ಎಂದರು ಆದಷ್ಟು ಬೇಗ ಸಿನಿಮಾವನ್ನು ಚಿತ್ರಮಂದಿರಗಳಲ್ಲು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ದತೆ ನಡೆಸಿದ್ದು ರುದ್ರಿ ಚಿತ್ರ ಸಿನಿ ಪ್ರೇಮಿಗಳಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
****